Connect with us

LATEST NEWS

ಉಡುಪಿ: ಕಾಲಿಗೆ ಮೊಬೈಲ್‌ ಕಟ್ಟಿ ಎಣಿಕೆ ಕೇಂದ್ರಕ್ಕೆ ಒಳನುಗ್ಗಲು ಯತ್ನಿಸಿದ ಯುವಕ: ಅಂಚೆ ಮತ ಎಣಿಕೆ ಪ್ರಾರಂಭ

ಉಡುಪಿ, ಮೇ 13: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದ್ದು ಎಣಿಕೆ ಕಾರ್ಯ ಆರಂಭವಾಗಿದೆ. ಇಲ್ಲಿನ ಸೈಂಟ್ ಸಿಸಿಲಿ ಕಾನ್ವೆಂಟ್‌ನಲ್ಲಿ ಮತ ಎಣಿಕೆ ನಡಿತಾ ಆರಂಭವಾಗಿದೆ.

ಅಂಚೆ ಮತದಾನ ಎಣಿಕೆ ನಡೆಯುತ್ತಿದೆ. ಈ ಮಧ್ಯೆ ಎಣಿಕಾ ಕೇಂದ್ರದ ಮೊಬೈಲ್‌ ನಿಷೇಧಿಸಲಾಗಿದೆ. ಈ ಮಧ್ಯೆ ಓರ್ವ ಕೇಸರಿ ಶಾಲುಧಾರಿ ಯುವಕ ಕಾಲಿಗೆ ಫೋನ್‌ ಕಟ್ಟಿಕೊಂಡು ಒಳನುಗ್ಗಲು ಯತ್ನಿಸಿದ್ದಾನೆ.

ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನನ್ನು ದ್ವಾರದಲ್ಲೇ ತಡೆಹಿಡಿದು ವಾಪಸ್ ಕಳುಹಿಸಿದ್ದಾರೆ. ಈತ ಬೈಂದೂರು ವಿಧಾನಸಭಾ ಕ್ಷೇತ್ರದ ಏಜೆಂಟ್ ಎಂದು ಗುರುತಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *