LATEST NEWS
ಉಡುಪಿ: ಅನಗತ್ಯ ತಿರುಗಾಟ ನಡೆಸಿದ ವಾಹನ ಚಾಲಕನಿಗೆ ಕಸ ಹೆಕ್ಕುವ ಶಿಕ್ಷೆ
ಉಡುಪಿ, ಮೇ 24: ಲಾಕ್ ಡೌನ್ ಅವಧಿಯಲ್ಲಿ ಅನಗತ್ಯ ತಿರುಗಾಟ ನಡೆಸಿದ ವಾಹನ ಚಾಲಕನಿಗೆ ಅಪರ ಜಿಲ್ಲಾಧಿಕಾರಿ ಕಸ ಹೆಕ್ಕುವ ಶಿಕ್ಷೆ ನೀಡಿ ಅದೇ ವಾಹನದಿಂದ ಕಸ ತ್ಯಾಜ್ಯ ವೀಲೇವಾರಿ ಮಾಡಿಸುವ ಮೂಲಕ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಅನಗತ್ಯವಾಗಿ ತಿರುಗಾಟ ನಡೆಸಿ ಅಪರ ಜಿಲ್ಲಾಧಿಕಾರಿ ಕೈಯಲ್ಲಿ ಗೂಡ್ಸ್ ಚಾಲಕ ಸಿಕ್ಕಿಬಿದ್ದಿದ್ದು, ಅನಗತ್ಯವಾಗಿ ತಿರುಗಾಟ ನಡೆಸಿದಕ್ಕೆ ರಾಷ್ಟ್ರೀಯ ಹೆದ್ದಾರಿ 66 ರ ಆಭರಣ ಮೋಟಾರ್ಸ್ ಎದುರಿನಿಂದ ಕಾಂಚನ ಮೋಟಾರ್ಸ್ವರೆಗೆ ಹೆದ್ದಾರಿ ಬದಿಯ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಕಸ ಹೆಕ್ಕಿ ಸ್ವಂತ ವಾಹನದಲ್ಲಿ ಡಂಪಿಂಗ್ ಯಾರ್ಡ್ ಗೆ ಸಾಗಿಸಿದರು.
ದಂಡ ಕಟ್ಟುವ ಬದಲು ಕಸ ಸಾಗಾಟ ಶಿಕ್ಷೆ ಒಪ್ಪಿಕೊಂಡ ಗೂಡ್ಸ್ ಚಾಲಕ ಒಪ್ಪಿಕೊಂಡಿದ್ದು, ಎಡಿಸಿ ಸದಾಶಿವ ಪ್ರಭು ಸೂಚನೆ ಮೇರೆಗೆ ಕಸ ಸಾಗಾಟ ನೀಡಲಾಗಿದೆ.
ಲಾಕ್ಡೌನ್ ಅವಧಿಯಲ್ಲಿ ಸಾರ್ವಜನಿಕರು ನಿಯಮ ಬಾಹಿರವಾಗಿ ವಾಹನಗಳಲ್ಲಿ ಸಂಚರಿಸದಂತೆ ಈ ಮೊದಲೇ ಸೂಚನೆ ನೀಡಲಾಗಿತ್ತು. ಇದನ್ನು ಉಲ್ಲಂಘಿಸಿದಲ್ಲಿ ಅಂತಹ ವಾಹನಗಳನ್ನು ಲಾಕ್ಡೌನ್ ಮುಗಿಯುವವರೆಗೂ ಕಸ ವಿಲೇವಾರಿ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.