LATEST NEWS
ಉಡುಪಿ : ಹಸಿರು ಪಟಾಕಿ ಮಧ್ಯೆ ಬೆಳಗಿದ ಹಸಿರು ಗೂಡುದೀಪ..!
ಉಡುಪಿ : ಉಡುಪಿ ಜಿಲ್ಲೆಯ ಪರ್ಕಳ ಅರ್ಜುನ ಯುವಕ ಮಂಡಲದದಿಂದ ಸರಳೇಬೆಟ್ಟು ಸಂಪರ್ಕಿಸುವ ಹೊಸ ರಸ್ತೆಯ ಬಳಿಯ ನಿವಾಸಿ ಶ್ರವಣ್ ನಾಯಕ್ ಕೈಚಳದಲ್ಲಿ ವಿಶಿಷ್ಟವಾದ ಗೂಡು ದೀಪ ಮೂಡಿ ಬಂದಿದೆ.
ಹಚ್ಚ ಹಸಿರಿನ ತೆಂಗಿನಮರದ ಗರಿ ಮತ್ತು ತೆಂಗಿನ ಮರದ ಹಳದಿ ಬಣ್ಣದ ಸಿರಿಯನ್ನು ಬಳಸಿ ಚತುರ್ಭುಜಾಕೃತಿಯ ಮಂಟಪ ಗೂಡು ದೀಪವನ್ನು ತಮ್ಮ ಮನೆಯ ತೋಟದ ತೆಂಗಿನ ಮರದ ಗರಿಗಳನ್ನು ಬಳಸಿ ಗೂಡುದೀಪ ರಚಿಸಿದ್ದಾರೆ.
ಉಡುಪಿಯ ನ್ಯೂ ಸಿಟಿ ನರ್ಸಿಂಗ್ ಕಾಲೇಜಿನ ಬಿ.ಎಸ್ ನರ್ಸಿಂಗ್ ವಿದ್ಯಾರ್ಥಿಯಾದ ಶ್ರವಣ್ ನಾಯಕ್ ಕಾಲೇಜಿನಲ್ಲಿ ನಡೆಸಿದ ಗೂಡು ದೀಪ ಸ್ಪರ್ಧೆಯಲ್ಲಿ ದ್ವೀತೀಯ ಸ್ಥಾನ ಕೂಡ ಪಡೆದಿದ್ದಾರೆ.
ಉಡುಪಿಯ ಜಿಲ್ಲಾಡಳಿತ ಮತ್ತು ಸರ್ಕಾರದ ನಿರ್ಧಾರ. ಈಬಾರೀ ಹಸಿರುಪಟಾಕಿಗಳನ್ನೇ ಬಳಸಿ ಎನ್ನುವ ಕಾಲಘಟ್ಟದಲ್ಲಿಯೇ ದೀಪಾವಳಿಯಲ್ಲಿಗೂಡು ದೀಪದಲ್ಲಿಯೂ ಹಸಿರೇ ಉಸಿರು ಎಂಬಂತೆ ಗೂಡು ದೀಪದ ಹೊಸ ಪರಿಕಲ್ಪನೆ ಸ್ವಾಗತವಾಗಿದೆ. ದೀಪಾವಳಿಯ ಮೂರ್ನಾಲ್ಕು ದಿನ ಬಳಸಬಹುದಾದ ವೆಚ್ಚ,ವಿಲ್ಲದ ಪರಿಸರ ಸ್ನೇಹಿ ಗೂಡು ದೀಪ ಎಲ್ಲರಿಗೂ ಮಾದರಿಯಾಗಿದೆ.