LATEST NEWS
ಉಡುಪಿ – ಹೃದಯಾಘಾತದಿಂದ ಸಾವನಪ್ಪಿದ 6ನೇ ತರಗತಿ ವಿಧ್ಯಾರ್ಥಿ

ಉಡುಪಿ, ಜುಲೈ 16: 11 ವರ್ಷದ ಬಾಲಕ ಮನೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನಪ್ಪಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಖಾಸಗಿ ಶಾಲೆಯ 6 ನೇ ತರಗತಿ ಕಲಿಯುತ್ತಿರವ ವಿದ್ಯಾರ್ಥಿ ರ‍್ಯಾನ್ಸ್ ಕ್ಯಾಥಲ್ ಡಿ’ಸೋಜಾ ಮೃತ ಬಾಲಕ. ಜುಲೈ 15 ರ ಮಂಗಳವಾರ ಬೆಳಿಗ್ಗೆ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ತೊಟ್ಟಂನ ಅಶ್ವಿನ್ ಮತ್ತು ಸರಿತಾ ಡಿ’ಸೋಜಾ ದಂಪತಿಯ ಪುತ್ರ ರ‍್ಯಾನ್ಸ್ ಕ್ಯಾಥಲ್ ಉಡುಪಿಯಲ್ಲಿ ಖಾಸಗಿ ಶಾಲೆಯಲ್ಲಿ 6ನೇ ತರಗತಿ ಕಲಿಯುತ್ತಿದ್ದಾನೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತೀಚೆಗೆ ಏಕಾಏಕಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಸರಕಾರ ಮಾತ್ರ ತಜ್ಞರ ವರದಿ ತರಿಸಿ ಸುಮ್ಮನಾಗುತ್ತಿದೆ. ಎಳೆ ವಯಸ್ಸಿನ ಮಕ್ಕಳು ಹೃದಯಾಘಾತದಿಂದ ಸಾವನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.