Connect with us

UDUPI

ಉಡುಪಿ ಮೂವರು ಪೊಲೀಸ್ ಸೇರಿದಂತೆ 53 ಮಂದಿಗೆ ಕೊರೊನಾ

ಉಡುಪಿ ಜುಲೈ 13: ಉಡುಪಿ ಜಿಲ್ಲೆಯಲ್ಲಿ ಇಂದು 53 ಕೊರೊನಾ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ 1661 ಕ್ಕೆ ಏರಿಕೆಯಾಗಿದೆ.


ಕುಂದಾಪುರದಲ್ಲಿ ಇಬ್ಬರು ಪೊಲೀಸರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಉಪವಿಭಾಗ ಕಚೇರಿಯ ಓರ್ವ ಪೊಲೀಸ್ ಸಿಬ್ಬಂದಿ, ಹೈವೇ ಪ್ಯಾಟ್ರೋಲ್ ಕರ್ತವ್ಯದಲ್ಲಿದ್ದ ಎಎಸ್ ಐ ಮತ್ತು ಅವರ ಕಾರು ಚಾಲಕನಿಗೆ ಕೋವಿಡ್-19 ಸೋಂಕು ದೃಢವಾಗಿದೆ.ಕುಂದಾಪುರದ ಎಎಸ್ಪಿ ಕಚೇರಿಯನ್ನು ಕುಂದಾಪುರ ಸರ್ಕಲ್ ಇನ್ಸಪೆಕ್ಟರ್ ಕಚೇರಿಗೆ ಸ್ಥಳಾಂತರಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಸೋಂಕು ದೃಢವಾದ 1661 ಮಂದಿಯಲ್ಲಿ 1280 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 378 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Facebook Comments

comments