Connect with us

    BANTWAL

    ವಿಧಾನಸಭಾಪತಿ ಯು.ಟಿ.ಖಾದರ್ 54 ನೇ ಹುಟ್ಟು ಹಬ್ಬವಿಶಿಷ್ಟವಾಗಿ ಆಚರಿಸಿದ ಯುಟಿ.ಖಾದರ್ ಅಭಿಮಾನಿ ಬಳಗ..!

    ಯುಟಿ.ಖಾದರ್ ಅಭಿಮಾನಿ ಬಳಗ ಫರಂಗಿಪೇಟೆ ಪುದು ಇದರ ವತಿಯಿಂದ ವಿಧಾನಸಭಾ ಸಭಾಧ್ಯಕ್ಷ  ಯು.ಟಿ.ಖಾದರ್ ಫರೀದ್ ರವರ 54 ನೇ ಹುಟ್ಟು ಹಬ್ಬವನ್ನು ಮೇರೆಮಜಲು ಲೋಕೇಶ್ ಪೆರ್ಗಡೆ ಫೌಂಡೇಶನ್ ಟ್ರಸ್ಟ್ ನವರ ಶ್ರೀ ಮಾತ ಲಕ್ಷ್ಮಣಿ ಶಾಂತಿ ಧಾಮ ಆಶ್ರಮದಲ್ಲಿ ಆಶ್ರಮವಾಸಿಗಳು ಕೇಕ್ ತುಂಡರಿಸಿ ಸಂಭ್ರಮಿಸಿದರು,

    ಬಂಟ್ವಾಳ :  ಯುಟಿ.ಖಾದರ್ ಅಭಿಮಾನಿ ಬಳಗ ಫರಂಗಿಪೇಟೆ ಪುದು ಇದರ ವತಿಯಿಂದ ವಿಧಾನಸಭಾ ಸಭಾಧ್ಯಕ್ಷ  ಯು.ಟಿ.ಖಾದರ್ ಫರೀದ್ ರವರ 54 ನೇ ಹುಟ್ಟು ಹಬ್ಬವನ್ನು ಮೇರೆಮಜಲು ಲೋಕೇಶ್ ಪೆರ್ಗಡೆ ಫೌಂಡೇಶನ್ ಟ್ರಸ್ಟ್ ನವರ ಶ್ರೀ ಮಾತ ಲಕ್ಷ್ಮಣಿ ಶಾಂತಿ ಧಾಮ ಆಶ್ರಮದಲ್ಲಿ ಆಶ್ರಮವಾಸಿಗಳು ಕೇಕ್ ತುಂಡರಿಸಿ ಸಂಭ್ರಮಿಸಿದರು,

    ಬಳಿಕ ಅಭಿಮಾನಿಗಳು ಆಶ್ರಮವಾಸಿಗಳಿಗೆ ಮಧ್ಯಾಹ್ನದ ಭೋಜನ ಬಡಿಸಿದರು.

    ಇದರ ಜೊತೆಗೆ 1 ಕಿಂಟ್ವಾಲ್ ಅಕ್ಕಿಯನ್ನು ನೀಡಿದರು. ಕೆ.ಪಿ.ಸಿ.ಸಿ.ಸದಸ್ಯ ,ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಮಾತನಾಡಿ,54 ನೇ ವರ್ಷದ ಹುಟ್ಟು ಹಬ್ಬವನ್ನು ಖಾದರ್ ಅಭಿಮಾನಿಗಳು ಮೇರೆಮಜಲು ಆಶ್ರಮದಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.

    ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ.ಸರ್ವ ಧರ್ಮದ ಜನರ ಜೊತೆ ಬೆರೆಯುವ ಖಾದರ್ ಅವರ ಹುಟ್ಟು ಹಬ್ಬವನ್ನು ಅವರ ಇಷ್ಟದಂತೆ ಆಶ್ರಮದ ನಿರ್ಗತಿಕರ ಜೊತೆಗೆ ವೈಶಿಷ್ಟ್ಯ ಪೂರ್ಣವಾಗಿ ಮಾಡಿದ್ದೇವೆ ಎಂಬ ಸಂತಸವಿದೆ.

    ಮುಂಬರುವ ದಿನಗಳಲ್ಲಿ ಖಾದರ್ ಅವರಿಗೆ ಆರೋಗ್ಯ,ಆಯುಷ್ಯ ಕೊಡಲಿ ಹಾಗೂ ಉನ್ನತ ಮಟ್ಟದ ಸ್ಥಾನಕ್ಕೆ ಏರಲಿ ಎಂದು ಅವರು ಶುಭ ಹಾರೈಕೆ ಮಾಡಿದರು.

    ಗ್ರಾ.ಪಂ.ಸದಸ್ಯ ರಮ್ಲಾನ್ ಮಾರಿಪಳ್ಳ ಮಾತನಾಡಿ, ಬಡವರ ಮತ್ತು ಎಲ್ಲ ವರ್ಗದವರ ಸೇವೆ ಮಾಡಲು ದೇವರು ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.

    ಮೇರೆಮಜಲು ಗ್ರಾ.ಪಂ.ಸದಸ್ಯೆ ವೃಂದಾ ಪೂಜಾರಿ ಮಾತನಾಡಿ, ಶಾಂತಿ,ಸಹನೆ ಮತ್ತು ಪ್ರೀತಿ ಮೂಲಕ ಮನೆಮಾತಾಗಿರುವ ಖಾದರ್ ಅವರಿಗೆ ಸರ್ವರ ಆಶ್ರೀರ್ವಾದ ಇರಲಿ ಎಂದು ಹಾರೈಸಿದರು.

    ಈ ಸಂದರ್ಭದಲ್ಲಿ ಪುದು ಉಪಾಧ್ಯಕ್ಷ ಇಕ್ಬಾಲ್ ಸುಜೀರು, ಗ್ರಾ.ಪಂ.ಸದಸ್ಯರಾದ ರಿಯಾಜ್ ಕುಂಪಣಮಜಲು, ಮಹಮ್ಮದ್ ಇಶಾಮ್, ಮಹಮ್ಮದ್ ಮೋನು, ಪುದು ವಲಯ ಅಧ್ಯಕ್ಷ ಅಹಮದ್ ಇರ್ಶಾದ್, ಮುಡಿಪು ಬ್ಲಾಕ್ ಉಪಾಧ್ಯಕ್ಷ ಮಜೀದ್ ಪೆರಿಮಾರ್, ಫೌಂಡೇಶನ್ ನ ಅಧ್ಯಕ್ಷ ಹರೀಶ್ ಪೆರ್ಗಡೆ, ಪ್ರಮುಖರಾದ ರಫೀಕ್ ಪೆರಿಮಾರ್, ಝಾಹೀರ್ ಕುಂಪಣಮಜಲು, ಮಲಿಕ್ ಕುಂಪಣಮಜಲು, ಮುಬಾರಕ್,ಆಶೀಫ್ ಮಾರಿಪಲ್ಲ, ಗಣೇಶ್ ಮೇರೆಮಜಲು, ಸಿರಾಜ್ ಮಾರಿಪಲ್ಲ,ಇರ್ಶಾದ್ ಸುಜೀರು ಡಿ.ಸಿ.ಸಿ‌.ಸದಸ್ಯೆ ಲೂಯಿಸಾ ಮೊಂತೆರೋ ಮೇರೆಮಜಲು, ತನ್ಸೀಫ್ ಮಾರಿಪಲ್ಲ ಮತ್ತಿತರರು ಉಪಸ್ಥಿತರಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *