DAKSHINA KANNADA
ರೋಮ್ : ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತರ ಜಗದ್ಗುರು ಪೋಪ್ ಅವರನ್ನು ಭೇಟಿಯಾದ ಯು.ಟಿ.ಖಾದರ್, 2025ಕ್ಕೆ ಪೋಪ್ ಭಾರತ ಭೇಟಿ
ಕ್ರೈಸ್ತರ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರನ್ನು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರು ಭೇಟಿಯಾಗಿ ಆಶೀರ್ವಾದ ಪಡೆದರು.
ರೋಮ್ : ಕ್ರೈಸ್ತರ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರನ್ನು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರು ಭೇಟಿಯಾಗಿ ಆಶೀರ್ವಾದ ಪಡೆದರು.
ಇಟಲಿ ರಾಜಧಾನಿ ರೋಮ್ ನ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಇತ್ತೀಚೆಗೆ ಭೇಟಿಯಾದ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಆಶೀರ್ವಾದ ಪಡೆದರು. ಪರಸ್ಪರ ಸಾಮರಸ್ಯ, ಸೌಹಾರ್ದದ ಭಾರತಕ್ಕಾಗಿ ಹಾಗೂ ಸದಾ ಶಾಂತಿ ನೆಲೆಸಲು ಪ್ರಾರ್ಥಿಸುವಂತೆ ಕೋರಿದರು.
ಭಾರತಕ್ಕೆ ಆಹ್ವಾನ ನೀಡಿದ ಪ್ರಧಾನಿ ಮೋದಿ
ಮುಂದಿನ ವರ್ಷ ಪೋಪ್ ಫ್ರಾನ್ಸಿಸ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಕಳೆದ ಜೂನ್‌ನಲ್ಲಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ತೆರಳಿದ್ದ ಪ್ರಧಾನಿ ಮೋದಿ ಅವರು ಪೋಪ್ ಫ್ರಾನ್ಸಿಸ್ ಅವರಿಗೆ ಭಾರತಕ್ಕೆ ಬರಲು ಆಹ್ವಾನ ನೀಡಿದ್ದಾರೆ.
ಪ್ರಧಾನಿ ಮೋದಿ ಅಹ್ವಾನ ಮೇರೆಗೆ ಭಾರತಕ್ಕೆ ಬರಲು ಒಪ್ಪಿಕೊಂಡಿರುವ ಪೋಪ್ ಫ್ರಾನ್ಸಿಸ್ ದಿನಾಂಕ ಘೋಷಣೆ ಮಾಡಬೇಕಿದೆ. ಭಾರತ ಭೇಟಿ ಸಂದರ್ಭ ಪೋಪ್ ಫ್ರಾನ್ಸಿಸ್ ಗೋವಾಕ್ಕೂ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ….