LATEST NEWS
ಈಜಲು ತೆರಳಿದ ಇಬ್ಬರು ನೀರಿನಲ್ಲಿ ಮುಳುಗಿ ಸಾವು

ಈಜಲು ತೆರಳಿದ ಇಬ್ಬರು ನೀರಿನಲ್ಲಿ ಮುಳುಗಿ ಸಾವು
ಉಡುಪಿ ಮೇ 18:ಹೊಳೆಗೆ ಈಜಲು ತೆರಳಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಆವರ್ಸೆ ಸಮೀಪ ನಡೆದಿದೆ.
ಸೀತಾನದಿಯ ಆನೆಗುಂಡಿಯಲ್ಲಿ ಕಿರಣ್ ಪೂಜಾರಿ ಮತ್ರು ವಿಕ್ರಂ ಪೂಜಾರಿ ಮೃತ ದುರ್ದೈವಿಗಳು. ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳಾಗಿದ್ದ ಕಿರಣ್ ಪೂಜಾರಿ ಮತ್ತು ವಿಕ್ರಂ ಪೂಜಾರಿ ಆವರ್ಸೆ ಹೊಳೆಗೆ ಕೈ ಕಾಲು ತೊಳೆದುಕೊಂಡು ಬರುತ್ತೇವೆ ಎಂದು ಹೋಗಿದ್ದರು.ಆದರೆ ಹೊಳೆಗೆ ಹೋದವರು ತುಂಬ ಹೊತ್ತು ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ.ಈ ವೇಳೆ ದುರ್ಘಟನೆ ಸಂಭವಿಸಿರುವುದು ಬೆಳಕಿಗೆ ಬಂದಿದೆ.ಕಿರಣ್ ಗೆ ಮೂರ್ಛೆ ರೋಗವಿದ್ದು ನೀರಿಗಿಳಿದಾಗ ಸಮಸ್ಯೆ ಕಾಣಿಸಿಕೊಂಡು ಮುಳುಗಿದ್ದಾನೆ.

ಆತನನ್ನು ರಕ್ಷಿಸಲು ಹೋದ ವಿಕ್ರಂ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.