LATEST NEWS
ಕೊಲ್ಲೂರು – ಕೆರೆಗೆ ಬಿದ್ದು ಇಬ್ಬರು ವಿಧ್ಯಾರ್ಥಿಗಳ ಧಾರುಣ ಸಾವು

ಕೊಲ್ಲೂರು, ಜೂನ್ 29: ಕೆರೆಗೆ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಬಿದ್ದು ಸಾವನಪ್ಪಿದ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಪಂಚಾಯತ್ ವ್ಯಾಪ್ತಿಯ ನಂದ್ರೋಳ್ಳಿ ಎಂಬಲ್ಲಿ ಇಂದು ನಡೆದಿದೆ.
ಮೃತರನ್ನು ನಂದ್ರೋಳ್ಳಿ ನಿವಾಸಿ ಶೀಲಾ ಹಾಗೂ ಸತೀಶ್ ಮಡಿವಾಳ ಎಂಬವರ ಮಗ ಧನರಾಜ್ (13) ಹಾಗೂ ಮಗಳು ಛಾಯ (7) ಎಂದು ಗುರುತಿಸಲಾಗಿದೆ. ಮಕ್ಕಳ ರಕ್ಷಣೆಗೆ ಮುಂದಾದ ತಾಯಿ ಶೀಲಾ ಗಂಭೀರವಾಗಿ ಅಸ್ವಸ್ಥಗೊಂಡು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Continue Reading