Connect with us

    LATEST NEWS

    ವಿಸ್ಮಯ – ಕಿನ್ನಿಗೋಳಿಯಲ್ಲಿ ಎರಡು ತಲೆ ಇರುವ ಕರು ಜನನ

    ಮೂಲ್ಕಿ ಸೆಪ್ಟೆಂಬರ್ 18: ಎರಡು ತಲೆ ಇರುವು ಕರುವೊಂದು ಜನನವಾದ ಘಟನೆ ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬವರ ಮನೆಯಲ್ಲಿ ನಡೆದಿದೆ.


    ಜಯರಾಮ ಜೋಗಿ ಅವರ ಮನೆಯ ಹಸು ಶನಿವಾರ ರಾತ್ರಿ ಎರಡು ತಲೆಹೊಂದಿರುವ ಕರುವಿಗೆ ಜನ್ಮನೀಡಿದೆ. ಪಶು ವೈದ್ಯರು ಹಸುವಿನ ಹೆರಿಗೆ ಮಾಡಿಸಿದ್ದು, ಕುರುವಿನ ಆರೋಗ್ಯ ಸ್ಥಿರವಾಗಿದೆ. ಕರುವಿಗೆ ಎರಡು ತಲೆ ಇದ್ದು ಒಂದೇ ದೇಹ ಇದೆ.

    ಒಟ್ಟು ನಾಲ್ಕು ಕಣ್ಣುಗಳಿದ್ದು ಮಧ್ಯಭಾಗದಲ್ಲಿರುವ ಎರಡು ಕಣ್ಣುಗಳು ಚಲನೆಯಲ್ಲಿಲ್ಲ. ಎರಡು ಬಾಯಿ ಇದೆ.  ಎರಡು ತಲೆಯಿಂದಾಗಿ ಎದ್ದು ನಿಲ್ಲಲು ಸಾಧ್ಯವಾಗದ ಈ ಕರುವಿಗೆ ವೈದ್ಯರ ಸಲಹೆಯಂತೆ ಫೀಡಿಂಗ್ ಬಾಟಲ್ ಮೂಲಕ ಹಾಲನ್ನು ನೀಡಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply