KARNATAKA
ಕಣ್ಣಾಮುಚ್ಚಾಲೆಗೆ ಐಸ್ಕ್ರೀಮ್ ಬಾಕ್ಸ್ನಲ್ಲಿ ಕುಳಿತಿದ್ದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವು
ಮೈಸೂರು: ಕಣ್ಣುಮುಚ್ಚಾಲೆ ಆಟ ಆಡುವಾಗ ಇಬ್ಬರು ಬಾಲಕಿಯರು ಐಸ್ ಕೀಮ್ ಬಾಕ್ಸ್ ನಲ್ಲಿ ಅಡಗಿ ಕುಳಿತಿದ್ದಾಗ ಉಸಿರುಗಟ್ಟಿ ಸಾವನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮಸಗೆ ಗ್ರಾಮದ ನಾಗರಾಜು-ಚಿಕ್ಕದೇವಮ್ಮ ಎಂಬುವರ ಪುತ್ರಿ ಭಾಗ್ಯ (12) ಹಾಗೂ ರಾಜನಾಯಕ -ಗೌರಮ್ಮ ಎಂಬುವರ ಪುತ್ರಿ ಕಾವ್ಯ (7) ಮೃತರು. ಕಣ್ಣಾಮುಚ್ಚಾಲೆ ಆಡುತ್ತಾ ಐಸ್ ಕ್ರೀಮ್ ಬಾಕ್ಸ್ ಒಳಗೆ ಅಡಗಿ ಕುಳಿತ ಬಾಲಕಿಯರು ಸುಮಾರು ಅರ್ಧ ಗಂಟೆ ಸಮಯ ಕಳೆದರೂ ಹೊರಬಂದಿಲ್ಲ. ಬಾಗಿಲು ತೆರೆದು ನೋಡಿದಾಗ ಉಸಿರುಗಟ್ಟಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.
ಮಕ್ಕಳು ಕಣ್ಣಾಮುಚ್ಚಾಲೆ ಆಡುವಾಗ ಐಸ್ ಕ್ರೀಮ್ ಬಾಕ್ಸ್ನಲ್ಲಿ ಅಡಗಿ ಕುಳಿತಿದ್ದಾಗ ಇಬ್ಬರು ಬಾಲಕಿಯರು ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ. ಆಟ ಆಡುತ್ತಿದ್ದ ಸಂದರ್ಭದಲ್ಲಿ ಐಸ್ ಕ್ರೀಮ್ ಬಾಕ್ಸ್ ಒಳಗೆ ನತದೃಷ್ಟ ಬಾಲಕಿಯರಿಬ್ಬರೂ ಲಾಕ್ ಆಗಿಬಿಟ್ಟಿದ್ದಾರೆ. ಆ ಐಸ್ ಕ್ರೀಮ್ ಬಾಕ್ಸ್ ಬಾಗಿಲು ತೆರೆಯಲಾಗದೆ ಉಸಿರುಗಟ್ಟಿ ಅಸುನೀಗಿದ್ದಾರೆ ಬಾಲಕಿಯರು.