Connect with us

    LATEST NEWS

    ಗಗನ ಸಖಿಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕ…!!

    ದೆಹಲಿ: ವಿಮಾನದಲ್ಲಿ ನಡೆಯುತ್ತಿರುವ ಅಸಭ್ಯ ವರ್ತನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದೀಗ ಗಗನ ಸಖಿಯನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ ಪ್ರಯಾಣಿಕನನ್ನು ಸ್ಪೈಸ್​ಜೆಟ್ ವಿಮಾನಯಾನ ಸಂಸ್ಥೆಯು ಕೆಳಗಿಳಿಸಿದ ಘಟನೆ ಸೋಮವಾರ ನಡೆದಿದೆ.


    ಜನವರಿ 23, 2023ರಂದು ದೆಹಲಿ-ಹೈದರಾಬಾದ್ ಸ್ಪೈಸ್​ಜೆಟ್ ವಿಮಾನದಲ್ಲಿ ಘಟನೆ ನಡೆದಿದೆ. ವಿಮಾನದ ಬೋರ್ಡಿಂಗ್ ವೇಳೆ ಒಬ್ಬ ಪ್ರಯಾಣಿಕರು ಸಿಬ್ಬಂದಿಯೊಂದು ಅನುಚಿತವಾಗಿ ವರ್ತಿಸಿದರು, ಹಿಂಸೆ ನೀಡಿದರು. ಅವರು ತಕ್ಷಣ ಈ ಕುರಿತು ಭದ್ರತಾ ದಳ ಹಾಗೂ ಇತರ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ಆರೋಪಿ ಪ್ರಯಾಣಿಕ ಹಾಗೂ ಸಹಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, ಭದ್ರತಾ ಸಿಬ್ಬಂದಿಯ ವಶಕ್ಕೆ ಒಪ್ಪಿಸಲಾಯಿತು’ ಎಂದು ಸ್ಪೈಸ್​ಜೆಟ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಗಗನಸಖಿಯೊಬ್ಬರಿಗೆ ಹಿಂಸೆಯಾಗುವ ರೀತಿಯಲ್ಲಿ ಆರೋಪಿ ಪ್ರಯಾಣಿಕ ಅಂಗಾಂಗ ಸ್ಪರ್ಶ ಮಾಡಿದ್ದ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಆರೋಪಿ ಪ್ರಯಾಣಿಕನು ತಾನು ಅಂಥ ದುಷ್ಕೃತ್ಯ ಎಸಗಿಲ್ಲ. ಅಚಾನಕ್​ ಆಗಿ ನನ್ನ ಕೈ ಅವರನ್ನು ಮುಟ್ಟಿತು. ವಿಮಾನದಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಹೀಗಾಯಿತೇ ವಿನಃ ಇದು ಉದ್ದೇಶಪೂರ್ವಕ ಕೃತ್ಯ ಅಲ್ಲ ಎಂದು ಸಮರ್ಥಿಸಿಕೊಂಡರು.

     

    Share Information
    Advertisement
    Click to comment

    You must be logged in to post a comment Login

    Leave a Reply