LATEST NEWS
ಮೂಡಿಗೆರೆ ಗೃಹಿಣಿ ಶ್ವೇತಾ ಸಾವಿಗೆ ಟ್ವಿಸ್ಟ್, ರಾಗಿ ಮುದ್ದೆಯಲ್ಲಿ ಸೈನೈಡ್ ಬೆರೆಸಿ ಕೊಲೆ ಮಾಡಿದ ಪತಿ..!
ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆಯ ಗೃಹಿಣಿ ಶ್ವೇತಾ ಅಸಹಜ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಪತಿ ದರ್ಶನ್ ನನ್ನು ವಶಕ್ಕೆ ಪಡೆದು ಗೋಣಿಬೀಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶ್ವೇತಾ ಮರಣೋತ್ತರ ಪರೀಕ್ಷೆಯ ವೇಳೆ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದ್ದು ವಿಷದ ಇಂಜೆಕ್ಷನ್ ನೀಡಿಲ್ಲ. ಬದಲಾಗಿ ರಾಗಿ ಮುದ್ದೆಯಲ್ಲಿ ಸೈನೈಡ್ ಬೆರೆಸಿ ತಿನ್ನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶ್ವೇತಾ ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ದರ್ಶನ್ ಕೂಡ ಒಪ್ಪಿಕೊಂಡಿದ್ದಾನೆ. ಹತ್ಯೆ ಮಾಡಿದ ಬಳಿಕ ಶ್ವೇತಾ ಕುಟುಂಬದವರಿಗೆ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾಳೆ ದರ್ಶನ್ ನಂಬಿಸಿದ್ದರು. ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಪ್ರಯತ್ನ ನಡೆಸಿದ್ದರು. ಕುಟುಂಬದವರು ಪಟ್ಟು ಹಿಡಿದು ಮರಣೋತ್ತರ ಪರೀಕ್ಷೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಕಳಸ ಪಟ್ಟಣದಲ್ಲಿ ಶ್ವೇತಾ ಅಂತ್ಯ ಸಂಸ್ಕಾರ ನಡೆದಿದೆ.
31 ವರ್ಷದ ಶ್ವೇತಾ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು ಮೃತ ಶ್ವೇತಾ ಹಾಗೂ ದರ್ಶನ್ ಇಬ್ಬರೂ ಲ್ಯಾಬ್ ಟೆಕ್ನಿಷಿಯನ್. ಶಿವಮೊಗ್ಗ, ಬೆಂಗಳೂರಿನಲ್ಲಿ ಲ್ಯಾಬ್‌ಗಳಿವೆ. ದರ್ಶನ್ ಮತ್ತು ಶ್ವೇತಾ ಪರಸ್ಪರ ಪ್ರೀತಿಸುತ್ತಿದ್ದರು. ಮೂರು ವರ್ಷದ ಹಿಂದೆ ವಿವಾಹವಾಗಿದ್ದು ಒಂದು ಮಗುವೂ ಇದೆ. ದರ್ಶನ್ ಲ್ಯಾಬ್‌ನಲ್ಲಿ ಕೆಲಸ ಮಾಡುವ ಅಶ್ವಿನಿಯನ್ನು ಪ್ರೀತಿಸುತ್ತಿದ್ದರು. ಶ್ವೇತಾ ದರ್ಶನ್ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದರು. ಶ್ವೇತಾ ದರ್ಶನ್ ಪ್ರೇಯಸಿ ಅಶ್ವಿನಿ ಜೊತೆ ಮಾತನಾಡಿರುವ ಎರಡು ಆಡಿಯೋ ಸಹ ಸಿಕ್ಕಿದೆ. ನಮ್ಮ ಸಂಸಾರ ಹಾಳು ಮಾಡಬೇಡ ಎಂದು ಶ್ವೇತಾ ಬೇಡಿಕೊಂಡಿದ್ದಾರೆ. . ನನ್ನ ಗಂಡನ ಸಹವಾಸಕ್ಕೆ ಬರಬೇಡ ಎಂದು ಶ್ವೇತಾ ಹೇಳಿದ್ದಾಳೆ. ಶ್ವೇತಾ ಸಾವಿನ ಪ್ರಕರಣ ಬೆಳಕಿಗೆ ಬಂದ ಬಳಿಕ ಅಶ್ವಿನಿ ಪರಾರಿಯಾಗಿದ್ದಾಳೆ. ಬೆಂಗಳೂರಿನ ಮಲ್ಲೇಶ್ವರ ನಿವಾಸಿಯಾಗಿರುವ ಅಶ್ವಿನಿ ಬಂಧನ ಭೀತಿಯಿಂದ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ನಾಲ್ಕು ದಿನಗಳ ಹಿಂದೆ ಶ್ವೇತಾಳನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಬೆಂಗಳೂರಿನಿಂದ ದೇವವೃಂದ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು. ರಾತ್ರಿ ಊಟದಲ್ಲಿ ಸೈನೈಡ್ ಹಾಕಿ ಹತ್ಯೆ ಮಾಡಿರುವ ಅನುಮಾನ ಇದ್ದು, ತನಿಖೆ ಮುಂದುವರೆದಿದೆ. ಮಗು ತಾಯಿಯ ಶವಕ್ಕೆ ಪೂಜೆ ಮಾಡುವಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಾವಿಗೆ ನ್ಯಾಯ ಬೇಕು ಎಂದು ದೇವರ ಬಳಿ ಕುಟುಂಬ ಸದಸ್ಯರ ಪ್ರಾರ್ಥನೆ ಮಾಡಿದ್ದಾರೆ.
ಇನ್ನು ಪ್ರಕರಣದ ಬಗ್ಗೆ ಬಗ್ಗೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಮಾತನಾಡಿದ್ದು, “ದರ್ಶನ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೃತ ಶ್ವೇತಾ ಹಾಗೂ ದರ್ಶನ್ ಇಬ್ಬರೂ ಲ್ಯಾಬ್ ಟೆಕ್ನಿಷಿಯನ್. ಕೆಮಿಕಲ್ ತಿನ್ನಿಸಿ ಕೊಲೆ ಮಾಡಿರುವುದಾಗಿ ಕಂಡು ಬಂದಿದೆ. ಎಫ್.ಎಸ್.ಎಲ್ ತಂಡ ವೈಜ್ಞಾನಿಕ ರೀತಿಯಲ್ಲಿ ತನಿಖೆ ಮಾಡುತ್ತಿದೆ. ತನಿಖೆ ನಡೆಯುತ್ತಿದೆ. ಸ್ಥಳ ಮಹಜರ್‌ನಲ್ಲಿ ಸಿಕ್ಕಿರುವ ಸಾಕ್ಷ್ಯಗಳು ಕೊಲೆ ಎಂದು ಹೇಳುತ್ತಿವೆ. ಮರಣೋತ್ತರ ಪರೀಕ್ಷೆ, ಎಫ್.ಎಸ್.ಎಲ್. ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ” ಎಂದಿದ್ದಾರೆ.