LATEST NEWS
ನೈತಿಕ ಪೊಲೀಸ್ ಗಿರಿಗೆ ಟ್ವಿಸ್ಟ್ :ಫಾತಿಮಾ ಬೀಚಿನಲ್ಲಿ ನಡೆದಿತ್ತೇ ವಿದ್ಯಾರ್ಥಿಗಳ ಕಾಮದಾಟ ?
ನೈತಿಕ ಪೊಲೀಸ್ ಗಿರಿಗೆ ಟ್ವಿಸ್ಟ್ :ಫಾತಿಮಾ ಬೀಚಿನಲ್ಲಿ ನಡೆದಿತ್ತೇ ವಿದ್ಯಾರ್ಥಿಗಳ ಕಾಮದಾಟ ?
ಮಂಗಳೂರು, ಮಾರ್ಚ್ 25 : ಮಂಗಳೂರಿನ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಸ್ಥಳೀಯರ ಪ್ರಕಾರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬರ್ತ್ ಡೇ ಪಾರ್ಟಿ ಹೆಸರಿನಲ್ಲಿ ಮೋಜು ಮಸ್ತಿಯೊಂದಿಗೆ ಕಾಮದಾಟದಲ್ಲಿ ತೊಡಗಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಣ್ಣೀರುಬಾವಿಯ ಫಾತಿಮಾ ಬೀಚ್ ಬಳಿಯ ಗ್ರಾಮಸ್ಥರು ಮಂಗಳೂರು ಪೋಲಿಸ್ ಕಮಿಷನರನ್ನು ಭೇಟಿಯಾಗಿದ್ದಾರೆ.
ತಣ್ನೀರುಬಾವಿಯಲ್ಲಿ ಬರ್ತ್ ಡೇ ಪಾರ್ಟಿ ಹೆಸರಿನಲ್ಲಿ ಬಂದ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರುಗಳು ಸ್ಥಳೀಯರಿಗೆ ಅಸಹ್ಯವಾಗುವಂತೆ ವರ್ತಿಸಿದ್ದಾರೆ.
ಇದನ್ನು ಪ್ರಶ್ನಿಸಿ, ಅಲ್ಲಿಂದ ತೆರಳುವಂತೆ ಸ್ಥಳೀಯರು ವಿದ್ಯಾರ್ಥಿಗಳನ್ನು ಗದರಿಸಿದ್ದರು ಎಂದು ಹೇಳಿದ್ದಾರೆ.
ಆದರೆ ತಡ ರಾತ್ರಿ ಯಾರದ್ದೋ ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳು ಪೊಲೀಸ್ ದೂರು ನೀಡಿದ್ದಾರೆ ಅಂತಾ ಪೋಲಿಸ್ ಆಯುಕ್ತರಿಗೆ ಹೇಳಿಕೆ ನೀಡಿದ್ದಾರೆ.
ಸ್ಥಳೀಯ ಅಮಾಯಕ ಹುಡುಗರ ವಿರುದ್ಧ ಪೊಲೀಸರು ಡಕಾಯಿತಿ, ದರೋಡೆ ಆರೋಪಗಳಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಅಂತಾ ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ.
ಈ ಎಲ್ಲದರ ಮಧ್ಯೆ, ಹಲ್ಲೆಗೊಳಗಾದ ಮೂವರು ಹುಡುಗರಲ್ಲಿ ಇಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬರ್ತ್ ಡೇ ಆಚರಣೆ ಮಾಡಿದ್ದಕ್ಕೆ ತಮಗೆ ಹೊಡೆದಿದ್ದಲ್ಲ. ಮುಸ್ಲಿಮರು ಎಂಬ ಕಾರಣಕ್ಕೆ ಹೊಡೆದಿದ್ದಾರೆ. ತಮ್ಮ ಜೊತೆಗಿದ್ದ ಸಹ ವಿದ್ಯಾರ್ಥಿ ನಿತೇಶ್ ಬಳಿ.
ನೀನು ಮುಸ್ಲಿಮರಿಗೆ ಯಾಕೆ ಸಪೋರ್ಟ್ ಮಾಡ್ತೀಯಾ ಅಂತ ಕೇಳಿ ಹೊಡೆದಿದ್ದಾರೆ ಎಂದು ಪೆಟ್ಟು ತಿಂದ ಹುಡುಗರು ಸ್ಪಷ್ಟನೆ ನೀಡಿದ್ದಾರೆ.
ಇದರೊಂದಿಗೆ ಹಿಂದು ಸಂಘಟನೆ ಕಾರ್ಯಕರ್ತರ ಮೇಲಿದ್ದ ನೈತಿಕ ಪೊಲೀಸ್ ಗಿರಿ ಆರೋಪ ಬೇರೆಯದ್ದೇ ರೂಪ ಪಡೆದುಕೊಂಡಿದೆ.
ಮಂಗಳೂರಿನ ಒಂದೇ ಕಾಲೇಜಿನ ಐವರು ವಿದ್ಯಾರ್ಥಿಗಳು ತಣ್ಣೀರುಬಾವಿಯ ಫಾತಿಮಾ ಬೀಚ್ ಗೆ ತೆರಳಿದ್ದಾಗ ಘಟನೆ ನಡೆದಿದ್ದು ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ್ದೇ ಘಟನೆಗೆ ಕಾರಣ ಅನ್ನೋ ಆರೋಪ ಕೇಳಿಬಂದಿದೆ.