LATEST NEWS
ಎಲಾನ್ ಮಸ್ಕ್ ಪಾಲಾದ ಟ್ವಿಟರ್….!!
ನ್ಯೂಯಾರ್ಕ್: ಪ್ರಮುಖ ಸಾಮಾಜಿಕ ಜಾಲತಾಣ ಟ್ವಿಟರ್ ಕಂಪೆನಿಯನ್ನು ಅಮೇರಿಕಾದ ಉದ್ಯಮಿ ಎಲಾನ್ ಮಸ್ಕ್ ಖರೀದಿಸಿದ್ದಾರೆ. ಎಲಾನ್ ಮಸ್ಕ್ ಪ್ರತಿ ಷೇರಿಗೆ 54.20 ಡಾಲರ್ನಂತೆ 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟರ್ ಖರೀದಿ ಮಾಡಿದ್ದಾರೆ.
ಎಲಾನ್ ಮಸ್ಕ್ ಅವರು ಟ್ವಿಟರ್‌ನಲ್ಲಿ ಶೇ 9.2ರಷ್ಟು ಷೇರು ಪಾಲು ಹೊಂದಿದ್ದರು. ನಂತರದಲ್ಲಿ ಪ್ರತಿ ಷೇರಿಗೆ 54.20 ಡಾಲರ್ (₹4149) ನಂತೆ ಪಾವತಿಸಿ, ಪೂರ್ತಿ ಪಾಲು ಖರೀದಿಗೆ ಇಂಗಿತ ವ್ಯಕ್ತಪಡಿಸಿದ್ದರು. ಟ್ವಿಟರ್ ಖರೀದಿ ಪ್ರಸ್ತಾಪಕ್ಕೆ ಮಂಡಳಿ ಸಮ್ಮತಿ ಸೂಚಿಸುವುದರೊಂದಿಗೆ, ಕಂಪನಿ ಪೂರ್ತಿಯಾಗಿ ಇದೀಗ ಎಲಾನ್ ಮಸ್ಕ್ ಪಾಲಾಗಿದೆ.
2013ರಿಂದ ಟ್ವಿಟರ್ ಸಾರ್ವಜನಿಕ ಷೇರು ಮೂಲಕ ಹೂಡಿಕೆ ಕಂಪನಿಯಾಗಿ ಬದಲಾಗಿತ್ತು. ಆದರೆ ಈಗ ಪೂರ್ತಿ ಷೇರು ಮಾರಾಟವಾಗಿ, ಎಲಾನ್ ಮಸ್ಕ್ ತೆಕ್ಕೆಗೆ ಬಂದಿರುವುದರಿಂದ, ಮುಂದೆ ಖಾಸಗಿ ಕಂಪನಿಯಾಗಿ ಮುಂದುವರಿಯಲಿದೆ.