Connect with us

    LATEST NEWS

    ಟರ್ಕಿ ಭೂಕಂಪ – 7900 ದಾಟಿದ ಸಾವಿನ ಸಂಖ್ಯೆ…20,000 ದಾಟುವ ಸಾಧ್ಯತೆ

    ಟರ್ಕಿ ಫೆಬ್ರವರಿ 08: ಸತತ ಭೂಕಂಪನದಿಂದ ಟರ್ಕಿ ಹಾಗೂ ಸಿರಿಯಾ ದೇಶಗಳು ಸಂಪೂರ್ಣ ನಾಶವಾಗಿದ್ದು, ಭೂಕಂಪನದಿಂದಾಗಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ ಮತ್ತೆ ಮತ್ತೆ ಭೂಕಂಪನ ಉಂಟಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.


    ಈ ನಡುವೆ ಸೋಮವಾರದ ಭೂಕಂಪದಿಂದ ದೇಶ ಚೇತರಿಸಿಕೊಳ್ಳುವ ಮೊದಲೇ ಮಂಗಳವಾರ ಮತ್ತೆ ರಿಕ್ಟರ್ ಮಾಪಕದಲ್ಲಿ 7.6 ಮತ್ತು 6 ತೀವ್ರತೆ ಹೊಂದಿದ್ದ ಎರಡು ಭೂಕಂಪ ಸಂಭವಿಸಿದ್ದು, ಪತನದ ಅಂಚಿನಲ್ಲಿದ್ದ ಮತ್ತಷ್ಟು ಕಟ್ಟಡಗಳನ್ನು ನೆಲಸಮ ಮಾಡಿವೆ.
    ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪನ ಪರಿಣಾಮ ಮೃತರ ಸಂಖ್ಯೆ ಕನಿಷ್ಠ 7,926ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟರ್ಕಿಯಲ್ಲಿ ಕನಿಷ್ಠ 5,894 ಜನರು ಸಾವನ್ನಪ್ಪಿದ್ದು, 34,810 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಉಪಾಧ್ಯಕ್ಷ ಫುವಾಟ್ ಒಕ್ಟೇ ಹೇಳಿದ್ದಾರೆ. ಟರ್ಕಿ ಮತ್ತು ಸಿರಿಯಾದ ದುರಂತವು 5,600ಕ್ಕೂ ಹೆಚ್ಚು ಕಟ್ಟಡಗಳು ನೆಲಕಚ್ಚುವಂತೆ ಮಾಡಿದೆ. ಅನೇಕ ನಗರಗಳಲ್ಲಿ ಕಟ್ಟಡಗಳು ನಾಮಾವಶೇಷವಾಗಿವೆ.


    ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾ ನಡುವಿನ 250 ಮೈಲು ಉದ್ದದ ಪ್ರದೇಶದಲ್ಲಿ ಭೂಕಂಪದಿಂದ ಭಾರೀ ಹಾನಿಯಾಗಿದ್ದು, ಅಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮತ್ತಷ್ಟು ವಿಚಾರಗಳು ಬಹಿರಂಗಗೊಳ್ಳಲಿದೆ. ಅದರಲ್ಲೂ ಎರಡು ದೇಶಗಳಲ್ಲಿನ ಕೆಲ ಪ್ರದೇಶಗಳು ಇನ್ನೂ ಯಾರ ಸಂಪರ್ಕಕ್ಕೂ ಬಂದಿಲ್ಲ. ಇದು ಬೇರೆಲ್ಲ ವಿಷಯಗಳಿಗಿಂದ ಮತ್ತಷ್ಟು ಆತಂಕಕ್ಕೆ ಗುರಿ ಮಾಡಿದೆ. ಇದರ ಜೊತೆಗೆ ಹಿಮಪಾತ, ಭಾರೀ ಶೀತ ವಾತಾವರಣ ರಕ್ಷಣಾ ಕಾರ್ಯಾಚರಣೆಗೆ ಹಿನ್ನಡೆಯನ್ನುಂಟು ಮಾಡುತ್ತಿದೆ ಎಂದು ತಿಳಿದುಬಂದಿದೆ.

    ಸಾವಿನ ಸಂಖ್ಯೆ 20,000 ದಾಟುವ ಸಾಧ್ಯತೆಗಳಿವೆ… ಟರ್ಕಿಯೊಂದರಲ್ಲಿಯೇ ಮೃತರ ಸಂಖ್ಯೆ 5,894 ದಾಖಲಾಗಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಒಟ್ಟಾರೆ ಎರಡೂ ದೇಶಗಳಲ್ಲಿನ ಮರಣ ಪ್ರಮಾಣ 20,000 ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply