Connect with us

    KARNATAKA

    ತುಮಕೂರಿನಲ್ಲಿ ಮಳೆಗಾಗಿ ಚಿಕ್ಕ ಮಕ್ಕಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು..!

    ರಾಜ್ಯದಲ್ಲಿ ಮಳೆ ಇಲ್ಲದೆ ಭೂಮಿ ಒಣಗುತ್ತಿದೆ, ಅನೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಅಹಕಾರ ಉಂಟಾಗಿದ್ದು ಎಲ್ಲೆಡೆ ಬರದ ಛಾಯೆ ಆವರಿಸಿದೆ.

    ತುಮಕೂರು : ರಾಜ್ಯದಲ್ಲಿ ಮಳೆ ಇಲ್ಲದೆ ಭೂಮಿ ಒಣಗುತ್ತಿದೆ, ಅನೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಅಹಕಾರ ಉಂಟಾಗಿದ್ದು ಎಲ್ಲೆಡೆ ಬರದ ಛಾಯೆ ಆವರಿಸಿದೆ.

    ಮಳೆಗಾಗಿ ಅನೇಕ ಕಡೆ ಪ್ತಾರ್ಥನೆ, ಹೋಮ ಹವನಗಳು ನಡೆಯುತ್ತಿವೆ.

    ಈ ಮಧ್ಯೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಬಜಗೂರು ಗ್ರಾಮದಲ್ಲಿ ಮಳೆಗಾಗಿ ಜನ ವಿಶಿಷ್ಟ ಆಚರಣೆ ನಡೆಸಿದ್ದಾರೆ.

    ವರುಣನ ಕ್ರಪೆಗಾಗಿ ಚಿಕ್ಕ ಮಕ್ಕಳಿಗೆ ಗ್ರಾಮಸ್ಥರು ಮದುವೆ ಮಾಡಿಸಿದ್ದಾರೆ. ನೂರಾರು ವರ್ಷಗಳಿಂದ ಗ್ರಾಮದಲ್ಲಿ ಈ ಪದ್ದತಿಯನ್ನು ಜನ ಆಚರಿಸಿಕೊಂಡು ಬರುತ್ತಿದ್ದಾರೆ.

    8 ದಿನಗಳ ಕಾಲ ಕಳಸ ಪೂಜೆ, 9ನೇ ದಿನ ಚಂದಮಾಮನ ಪೂಜೆ ಬಳಿಕ ಚಿಕ್ಕ ಮಕ್ಕಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು ಇದರಿಂದ ಮಳೆ ಬರುತ್ತೆ ಎಂಬ ನಂಬಿಕೆಯಲ್ಲಿದ್ದಾರೆ.

    ಇಬ್ಬರು ಬಾಲಕಿಯರಿಗೆ ಗಂಡು, ಹೆಣ್ಣಿನ ವೇಷ ಧರಿಸಿ ಈ ವಿಶಿಷ್ಟ ಮದುವೆಯ ಆಚರಣೆ ಮಾಡಿದ್ದು ಮದುಮಗನಾಗಿ ಸಿಂಧು, ಮದುಮಗಳಾದ ಕೃತಿಕ ಪಾತ್ರಧಾರಿಗಳಾಗಿದ್ದು ಊರಿನ ಎಲ್ಲಾ ಜನ ಈ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *