DAKSHINA KANNADA
ವಿಶ್ವಮಟ್ಟದಲ್ಲಿ ಗುರ್ತಿಸಿಕೊಂಡ ತುಳುನಾಡಿನ ಕಂಬಳ ಕ್ರೀಡೆ ದೇಶಕ್ಕೆ ಹಿರಿಮೆ : ಡಿಸಿಎಂ ಡಿ ಕೆ ಶಿವಕುಮಾರ್..!
ಮಂಗಳೂರು : 12ನೇ ವರ್ಷದ ತಿರುವೈಲೋ ತ್ಸವದ ಅಂಗವಾಗಿ ಏರ್ಪಡಿಸಿರುವ ಮಂಗಳೂರು ವಾಮಂಜೂರಿನ ತಿರುವೈಲುಗುತ್ತು ಸಂಕುಪೂಂಜ-ದೇವಪೂಂಜ ಜೋಡುಕೆರೆ ಕಂಬಳ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ಪಾಲ್ಗೊಂಡರು.
ಈ ಸಂದರ್ಭ ಮಾತನಾಡಿದ ಅವರು ನಮ್ಮ ಸಂಸ್ಕೃತಿ ನಮ್ಮ ದೇಶದ ಆಸ್ತಿ. ಈ ಆಸ್ತಿಯನ್ನು ಕಾಪಾಡಿಕೊಂಡು ಬಂದಿರುವ ನಿಮಗೆ ಈಶ್ವರ ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಇದು ತುಳುನಾಡಿನ ಪವಿತ್ರವಾದ ಭೂಮಿ. ಸರ್ವಜನಾಂಗದ ಶಾಂತಿಯ ತೋಟವಾಗಿ ಈ ಭೂಮಿಗೆ ವಿಶೇಷ ಶಕ್ತಿ ಇದೆ. ಇದು ವಿದ್ಯಾ ಕ್ಷೇತ್ರ, ಆರ್ಥಿಕ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಎಲ್ಲಾ ರಂಗದಲ್ಲೂ ಉದ್ಯೋಗ ಸೃಷ್ಟಿಸುವ ಪವಿತ್ರ ಭೂಮಿ.ಈ ಭೂಮಿಯಲ್ಲಿ ನಮ್ಮ ನಾಡಿನ ಕ್ರೀಡೆಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರಲಾಗಿದೆ. ಈ ಭಾಷೆ, ಸಂಸ್ಕೃತಿ ರಾಜ್ಯಕ್ಕೆ ಮೆರುಗು ನೀಡಿದೆ. ನಾನು ಇಂದು ಕಂಬಳ ವೀಕ್ಷಣೆ ಮಾಡಿ, ಇದರ ಅಭಿಮಾನಗಳಿಗೆ, ಆಯೋಜಕರು, ಪ್ರೋತ್ಸಾಹ ನೀಡುವವರಿಗೆ ಶುಭ ಹಾರೈಸಿ ನಿಮ್ಮ ಜತೆ ಸರ್ಕಾರ ಇದೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ.ಈ ವರ್ಷ ನಾನು ಉಪಮುಖ್ಯಮಂತ್ರಿಯಾಗಿ ಬೆಂಗಳೂರಿನ ಜವಾಬ್ದಾರಿ ವಹಿಸಿಕೊಂಡ ನಂತರ ಇದನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಪ್ರೋತ್ಸಾಹವನ್ನು ನಾವು ಸದಾ ಮುಂದುವರಿಸುತ್ತೇವೆ. ಈ ಕಂಬಳ ಕ್ರೀಡೆ ದೇಶಕ್ಕೆ ಹಿರಿಮೆಯಾಗಿದೆ. ವಿಶ್ವಮಟ್ಟದಲ್ಲಿ ಈ ಕ್ರೀಡೆ ಗುರುತಿಸಿಕೊಳ್ಳಬೇಕು ಎಂದು ನಾವು ಬಯಸುತ್ತಿದ್ದು, ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ನೀಡಲು ನಾನು ಬದ್ಧ. ನಿಮ್ಮ ಸರ್ಕಾರ ನಿಮ್ಮ ಜತೆ ಇರಲಿದೆ. ಇದನ್ನು ಉಳಿಸಿ ಬೆಳೆಸಿ. ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೆ ಶುಭಕೋರುತ್ತೇನೆ.ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಆಳ್ವ, ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ, ಮಿಥುನ್ ರೈ, ಪದ್ಮರಾಜ್, ನಿತಿನ್ ಶೆಟ್ಟಿ, ರಾಹುಲ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು