BANTWAL
ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ಟ್ವೀಟ್ ಮೂಲಕ ಹಕ್ಕೊತ್ತಾಯ, ಸಿಕ್ಕಿತು ಭಾರಿ ಜನಬೆಂಬಲ
ಮಂಗಳೂರು, ಆಗಸ್ಟ್ 11 : ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರ್ಪಡೆ ಗೋಳಿಸಲು ನಡೆಸಿದ ಟ್ವೀಟ್ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಪಂಚ ದ್ರಾವಿಡ ಭಾಷೆ ಗಳಲ್ಲಿ ಒಂದಾಗಿರುವ ಹಾಗೂ ಪ್ರಾಚೀನ ಭಾಷೆಯಾಗಿರುವ ತುಳು ಭಾಷೆಗೆ ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಹಲವಾರು ಹೋರಾಟಗಳು, ಪ್ರತಿಭಟನೆಗಳು ಸ್ಥಳೀಯ ಹಾಗೂ ದೂರದ ದೆಹಲಿಯಲ್ಲಿ ನಡೆದರೂ ತುಳು ಭಾಷೆಯನ್ನು ನಿರ್ಲಕ್ಷಿಸಲಾಗಿತ್ತು. ತುಳು ಭಾಷಾ ವರ್ದನೆಗಾಗಿ ಹುಟ್ಟಿಕೊಂಡ ಜೈ ತುಳುನಾಡು ಯುವಕರ ತಂಡ ಈ ಟ್ವೀಟರ್ ಅಭಿಯಾನ ಹಮ್ಮಿಕೊಂಡಿತ್ತು. ಈಗ ಮತ್ತೊಮ್ಮೆ ರಾಜ್ಯ ಹಾಗು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಕರಾವಳಿಯ ಯುವ ಪಡೆ ಸಾಮಾಜಿಕ ಜಾಲತಾಣ ಗಳ ಮೂಲಕ ಅಭಿಯಾನ ಆರಂಭಿಸಿದೆ. ಇದಕ್ಕಾಗಿ ಅತೀ ಹೆಚ್ಚು ಪ್ರಚಲಿತವಾಗಿರುವ ಟ್ವೀಟ್ ಅಭಿಯಾನ ಹಮ್ಮಿ ಕೊಂಡಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಗಿದೆ. #Tulu To 8th Schedule ಹ್ಯಾಶ್ ಟ್ಯಾಗ್ ನೊಂದಿಗೆ ನಡೆದ ಈ ಅಭಿಯಾನದ ಪ್ರಾಯುಕ್ತ 30.000 ಟ್ವೀಟ್ ಮಾಡುವ ಗುರಿ ಹೊಂದಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದ್ದು 45,000 ಕ್ಕೂ ಹೆಚ್ಚು ಟ್ವೀಟ್ ಮಾಡಲಾಗಿದೆ. ಇದರಲ್ಲಿ ಸುಮಾರು 16,300 ದಷ್ಟು ಗಲ್ಫ್ ನಲ್ಲಿರು ತುಳುವರೇ ಟ್ವೀಟ್ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಮಡಿಕೇರಿ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ತುಳುವರು ಹಾಗೂ ತುಳು ಅಭಿಮಾನಿಗಳು ಟ್ವೀಟರ್ ಅಭಿಯಾನದಲ್ಲಿ ಭಾಗವಹಿಸಿದ್ದರು.
ಈ ಅಭಿಯಾಯದ ಯಶಸ್ಸಿನ ಬಗ್ಗೆ ಪ್ರತಿಕ್ರೀಯಿಸಿರುವ ಜೈ ತುಳುನಾಡು ತಂಡದ ಅದ್ಯಕ್ಷ ಅಶ್ವತ್ ಟ್ವೀಟ್ ಅಭಿಯಾನಕ್ಕೆ ಜಯ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಅದು ಏನೇ ಇರಲಿ, ಶೀಘ್ರದಲ್ಲೇ ತುಳು ಭಾಷೆ 8 ನೇ ಪರಿಚ್ಛೇದಕ್ಕೆ ಸೇರ್ಪಡೆ ಆಗಲಿ ಮತ್ತು ಜಾಗತಿಕ ಮಟ್ಟದಲ್ಲಿ ತುಳು ಭಾಷೆ ಪಸರಿಸಲಿ ಎಂಬುದೇ ತುಳುವರ ಅಭಿಲಾಷೆ..