LATEST NEWS
ತುಳು ಭಾಷೆ ಮಾನ್ಯತೆಗಾಗಿ ಮಂಗಳೂರಿನಲ್ಲಿ ಪ್ರತಿಭಟನೆ

ಮಂಗಳೂರು ಅಕ್ಟೋಬರ್ 11: ತುಳು ಭಾಷೆಗೆ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಮಂಗಳೂರಿನಲ್ಲಿ ಅಪ್ಪೆ ಬಾಸೆ ಪೊರ್ಂಬಾಟ ಕೂಟ, ತುಳುನಾಡ್ ವತಿಯಿಂದ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಚಲನಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ, ‘ತುಳು ಭಾಷೆಗೆ ಸರಿಯಾದ ಮನ್ನಣೆ ಸಿಗದಿರುವುದು ನಿಜಕ್ಕೂ ದುರಂತ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆ ಸೇರಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ’ ಎಂದು ದೂರಿದರು.

ತುಳು ರಂಗಭೂಮಿ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, ತುಳುನಾಡಿನ ಜನರು ಜಗತ್ತಿನಾದ್ಯಂತ ಇದ್ದಾರೆ. ಅವರು ಆರ್ಥಿಕವಾಗಿ, ಶಿಕ್ಷಣದಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆ ಯನ್ನು ಸೇರಿಸುವ ಕಾರ್ಯ ಹಿಂದೆಯೇ ಹಿಂದೆಯೇ ಆಗಬೇಕಿತ್ತು’ ಎಂದರು. ಅಕ್ಟೋಬರ್ 25ರೊಳಗೆ ತುಳು ಭಾಷೆಗೆ ಸರ್ಕಾರ ಸೂಕ್ತ ಮನ್ನಣೆ ನೀಡದಿದ್ದಲ್ಲಿ ತುಳುನಾಡಿನ ಸಾರ್ವಜನಿಕರು ನವೆಂಬರ್‌ನಲ್ಲಿ ಬಂದ್‌ಗೆ ಕರೆ ನೀಡುವುದಾಗಿ ಅಪ್ಪೆ ಬಾಸೆ ಪೊರ್ಂಬಾಟ ಕೂಟದ ಸಂಚಾಲಕ ಸುದರ್ಶನ್ ಸುರತ್ಕಲ್ ಆಗ್ರಹಿಸಿದರು.