Connect with us

LATEST NEWS

ಟಾಲಿವುಡ್ ಸಿನಿಮಕ್ಕೆ ಅಂಕುಶ ಹಾಕಿದ ಕೋಸ್ಟಲ್ ವುಡ್

ಟಾಲಿವುಡ್ ಸಿನಿಮಾಕ್ಕೆ ಅಂಕುಶ ಹಾಕಿದ ಕೋಸ್ಟಲ್ ವುಡ್

ಮಂಗಳೂರು,ಸೆಪ್ಟಂಬರ್ 25: ಅರೆ ಮರ್ಲೆರ್ ಚಿತ್ರವನ್ನು ಮಂಗಳೂರಿನ ಪ್ರಭಾತ್ ಚಿತ್ರಮಂದಿರದಿಂದ ಎತ್ತಂಗಡಿ ಮಾಡಿ ತೆಲುಗು ಚಿತ್ರ ಹಾಕಲು ಯತ್ನಿಸಿದ ಮಾಲಕರ ವಿರುದ್ಧ ತುಳು ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ನಗರದ ಪ್ರಭಾತ್ ಚಿತ್ರ ಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದ ‘ಅರೆ ಮರ್ಲೆರ್’ ಚಿತ್ರವನ್ನು ತೆಗೆದು ತೆಲುಗು ಚಿತ್ರ ಸ್ಪೈಡರ್ ಚಿತ್ರವನ್ನು ಪ್ರದರ್ಶನಗೊಳಿಸಲು ಬೆಂಗಳೂರಿನ ಚಿತ್ರ ವಿತರಕರೊಬ್ಬರು ಸಿದ್ದತೆ ನಡೆಸಿದ್ದರು. ಇದೇ ಶುಕ್ರವಾರ  ಅರೆಮರ್ಲೆರ್ ತುಳು ಚಿತ್ರವನ್ನು ಎತ್ತಂಗಡಿ ಮಾಡಿ ಆ ಜಾಗದಲ್ಲಿ ತೆಲುಗು ಚಿತ್ರ ಸ್ಪೈಡರ್ ಹಾಕಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿತ್ತು. ಈ ಮಾಹಿತಿ ತಿಳಿದ ಕರಾವಳಿಯ ತುಳು ಚಿತ್ರರಂಗ ಒಟ್ಟಾಗಿ ಇಂದು ಏಕಾಏಕಿ ಪ್ರಭಾತ್ ಥಿಯೇಟರಿಗೆ ಮುತ್ತಿಗೆ ಹಾಕಿ, ಆ ತೆಲುಗು ಚಿತ್ರ ವಿತರಕನ್ನು ಚೆನ್ನಾಗಿ ತದಕಿದೆ.

ತುಳು ಚಿತ್ರ ರಂಗದ ಕೋಪಕ್ಕೆ ಕಾರಣ :

ಅರೆಮರ್ಲೆರ್ ಉತ್ತಮ ಗಳಿಕೆಯನ್ನು ಮಾಡುತ್ತಿದ್ದು,ಯಾವುದೇ ಕಾರಣಕ್ಕೂ ಈ ಚಿತ್ರ ಎತ್ತಂಗಡಿಗೆ ಬಿಡುವುದಿಲ್ಲ ಎಂದು ಎಚ್ಚರಿಸಿದ ತುಳು ಚಿತ್ರ ರಂಗದ ಮಹನೀಯರು, ಒಂದು ವೇಳೆ ಎತ್ತಂಗಡಿ ಮಾಡಿದಲ್ಲಿ ಮುಂದೆ ಮಂಗಳೂರಿನ ಯಾವುದೇ ಥೀಯೆಟರುಗಳಲ್ಲಿ ಅನ್ಯ ಭಾಷಾ ಚಲನ ಚಿತ್ರಗಳನ್ನು ಬಿಡುಗಡೆಗೆ ಅವಕಾಶ ನೀಡಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನೆಯ ಗಂಭೀರತೆ ಅರಿತ ಚಿತ್ರ ವಿತರಕರು ಕಾಲಿಗೆ ಬುದ್ದಿ ಹೇಳಿ ಸ್ಥಳದಿಂದ ಪಲಾಯನ ಗೈದರು. ತುಳು ಸಂಘಟನೆಗಳ ಪದಾಧಿಕಾರಿಗಳು, ತುಳು ಚಿತ್ರನಟರು, ನಿರ್ದೇಶಕರು ಹಾಗೂ ನಿರ್ಮಾಪಕರು, ಕಲಾವಿದರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ, ವಿಜಯಕುಮಾರ್ ಕೊಡಿಯಲ್ ಬೈಲ್, ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ,  ನಟ ಅರ್ಜುನ್ ಕಾಪಿಕಾಡ್, ದೇವದಾಸ್ ಕಾಪಿಕಾಡ್  ಮತ್ತು ತುಳು ಚಿತ್ರರಂಗದ ಅನೇಕ ಮಹನೀಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share Information
Advertisement
Click to comment

You must be logged in to post a comment Login

Leave a Reply