LATEST NEWS
ಅಕ್ಷರ ಸಂತನ ಭೇಟಿಯಾದ ವೃಕ್ಷಮಾತೆ…ಹಾಜಬ್ಬ ಅವರ ಮನೆಗೆ ಬಂದ ತುಳಸಿಗೌಡ

ಮಂಗಳೂರು ನವೆಂಬರ್ 13: ಪದ್ಮಶ್ರೀ ಹರೇಕಳ ಹಾಜಬ್ಬರ ಮನೆಗೆ ಅಂಕೋಲಾ ತಾಲೂಕಿನ ಪರಿಸರ ಪ್ರೇಮಿ ಪದ್ಮಶ್ರೀ ತುಳಸಿ ಗೌಡ ಭೇಟಿಯಾಗಿ ಮಾತುಕತೆ ನಡೆಸಿದರು.
ಇಂದು ಬೆಳಗ್ಗೆ ನ್ಯೂಪಡ್ಪುವಿನಲ್ಲಿರುವ ಹಾಜಬ್ಬರ ಮನೆಗೆ ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ಭೇಟಿ ನೀಡಿದ ತುಳಸಿ ಗೌಡರನ್ನು ಹಾಜಬ್ಬ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭ ಮಾತನಾಡಿದ ಹಾಜಬ್ಬ, ಪದ್ಮಶ್ರೀ ತುಳಸೀ ಗೌಡ ಅವರು ಈ ಬಡವನ ಮನೆಗೆ ಭೇಟಿ ನೀಡಿರುವುದು ನನ್ನ ಪುಣ್ಯ. ದಿಲ್ಲಿಯಲ್ಲಿ ವಿಮಾನ ನಿಲ್ದಾಣದಲ್ಲಿ ವರನ್ನು ಭೇಟಿಯಾದರೂ ಮಾತುಕತೆಗೆ ಸರಿಯಾದ ಅವಕಾಶ ದೊರೆತಿರಲಿಲ್ಲ. ಇದೀಗ ನನ್ನ ಮನೆಗೇ ಈ ಅಮ್ಮ ಬಂದಿರುವುದು ನನ್ನ ಜೀವನದಲ್ಲಿ ದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭ ಮಾತನಾಡಿದ ವೃಕ್ಷ ಮಾತೆ ತುಳಸಿಗೌಡ ಅವರು ಹಾಜಬ್ಬ ಅವರನ್ನು ಭೇಟಿ ಮಾಡಿದ್ದು ಖುಷಿಯಾಗಿದ್ದು, ಇವರ ಕನಸಿಗೆ ಎಲ್ಲರೂ ಸಹಕರಿಸಬೇಕೆಂದರು. ಅಲ್ಲದೆ ಹಾಜಬ್ಬರ ಪಿ.ಯು ಕಾಲೇಜು ತೆರೆಯುವ ಕನಸಿಗೆ ಆರ್ಥಿಕ ಸಹಾಯವನ್ನು ಈ ಸಂದರ್ಭ ನೀಡಿದರು. ನಂತರ ಹಾಜಬ್ಬ ಅವರ ಶಾಲೆಗೂ ಭೇಟಿ ನೀಡಿದರು. ಈ ಸಂದರ್ಭ ವಿದ್ಯಾರ್ಥಿಗಳು ತುಳಸಿಗೌಡ ಅವರನ್ನುಅದ್ದೂರಿಯಾಗಿ ಸ್ವಾಗತಿಸಿದರು.