LATEST NEWS
ಗುಜರಾತ್ ಕರಾವಳಿಯಲ್ಲಿ ATS, NCB ಜಂಟಿ ಕಾರ್ಯಾಚರಣೆ, 602 ಕೋ. ಮೌಲ್ಯದ ಡ್ರಗ್ಸ್ ವಶ 14 ಪಾಕ್ ಪ್ರಜೆಗಳ ಬಂಧನ..!
ಗಾಂಧಿನಗರ: ಗುಜರಾತ್ ಕರಾವಳಿಯಲ್ಲಿ ATS, NCB ಜಂಟಿ ಕಾರ್ಯಾಚರಣೆ ನಡೆಸಿದ್ದು 14 ಪಾಕಿಸ್ತಾನಿಗಳನ್ನು ಬಂಧಿಸಿ ಅವರಿಂದ 602 ಕೋ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಈ ಜಣಟಿ ಕಾರ್ಯಾಚರಣೆಯನ್ನು ನಡೆಸಿದ್ದು 86 ಕೆಜಿಗಳಷ್ಟು ನಿಷಿದ್ಧ ಮಾದಕ ಪದಾರ್ಥಗಳನ್ನು ವಶಕ್ಕೆ ಪಡದಿದ್ದಾರೆ.ಸಮುದ್ರದಲ್ಲಿ ನಡೆದ ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಪಾಕಿಸ್ತಾನಿ ಪ್ರಜೆಗಳು, ಎಟಿಎಸ್ ಅಧಿಕಾರಿಗಳ ಮೇಲೆ ದೋಣಿಯನ್ನು ಹಾಯಿಸಲು ಪ್ರಯತ್ನಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ‘ಮಿಯಾಂವ್ ಮಿಯಾಂವ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ನಿಷೇಧಿತ ಡ್ರಗ್ ಮೆಫೆಡ್ರೋನ್ ತಯಾರಿಸುವ ಮೂರು ಲ್ಯಾಬ್‌ಗಳನ್ನು ಎನ್‌ಸಿಬಿ ಭೇದಿಸಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿದ ಒಂದು ದಿನದ ನಂತರ ಈ ಪ್ರಕರಣ ಸಂಭವಿಸಿದೆ. ಡ್ರಗ್ಸ್ ವಿರೋಧಿ ಸಂಸ್ಥೆ ಸುಮಾರು 300 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ.ಗುಜರಾತಿನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುಜರಾತ್ ಮತ್ತು ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಲ್ಯಾಬ್‌ಗಳ ಮೇಲೆ ದಾಳಿ ಮಾಡಿದೆ. ಈ ಲ್ಯಾಬ್‌ಗಳಲ್ಲಿ ಮೆಫೆಡ್ರೋನ್ ಅನ್ನು ಉತ್ಪಾದಿಸಲಾಗುತ್ತಿತ್ತು.