Connect with us

    KARNATAKA

    ಮಡಿಕೇರಿ ಮೈಸೂರು ಹೆದ್ದಾರಿಯಲ್ಲಿ ಕಾಡಾನೆಯಿಂದ ಅಡ್ಡಗಟ್ಟಿ ಲಾರಿ ದರೋಡೆ..!!!

    ಮಡಿಕೇರಿ : ಮಡಿಕೇರಿ  ಮೈಸೂರು ರಸ್ತೆಯ ಆನೆ ಚೌಕೂರು ಬಳಿ ಕಾಡಾನೆಯೊಂದು  ಲಾರಿಯೊಂದನ್ನು ತಡೆಗಟ್ಟಿ  ಮನಸೋ ಇಚ್ಚೆ ತರಕಾರಿ ಭಕ್ಷಿಸಿದ ಘಟನೆ ನಡೆದಿದೆ.

    ರಾತ್ರಿ 10.45ರ ಸುಮಾರಿಗೆ ಈ ಘಟನೆ ನಡೆದಿದ್ದು ಲಾರಿಯನ್ನು ಅಡ್ಡಗಟ್ಟಿದ ಒಂಟಿ ಸಲಗ ವಾಹನದ ಹಿಂಭಾಗಕ್ಕೆ ತೆರಳಿ ಟಾರ್ಪಲ್ ಎಳೆದು ವಿವಿಧ ತರಕಾರಿಗಳನ್ನ ಎಳೆದು ರಸ್ತೆಗೆ ಹಾಕಿ ತಿಂದು ತೇಗಿ ಬಳಿಕ ಕಾಡಿನತ್ತ ಹೆಜ್ಜೆ ಹಾಕಿದೆ.  ಮೈಸೂರಿನಿಂದ‌ ತರಕಾರಿ ತುಂಬಿದ ಲಾರಿಯೊಂದು ಆನೆಚೌಕೂರು, ಗೋಣಿಕೊಪ್ಪಲು ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿತ್ತು.

    ಸದ್ಯ ಲಾರಿ ಚಾಲಕ ತರಕಾರಿ ಕಳೆದುಕೊಂಡು ಪರಿತಪಿಸಿದ್ದು ಅರಣ್ಯಾಧಿಕಾರಿಗಳ ವಸತಿ ಗೃಹ ಅಲ್ಲೇ ಸಮೀಪದಲ್ಲೇ ಇದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ ಎನ್ನಲಾಗಿದ್ದು ಬಳಿಕ  ಉಳಿದ ತರಕಾರಿ ತೆಗೆದುಕೊಂಡು ಕೇರಳ ಕಡೆ ತೆರಳಿದ್ದಾನೆ.ಆ ನೆ ತಿಂದ ತರಕಾರಿಗಳಿಂದ ನಷ್ಟ ಅನುಭವಿಸಿದ ಚಾಲನಿಗೆ ಪರಿಹಾರ ನೀಡುವಂತೆ ಸಾರ್ವಜನಿಕರು ಅರಣ್ಯಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply