LATEST NEWS
ತ್ರಿವಳಿ ತಲಾಕ್ ಕಾನೂನಿನ ಮೂಲಕ ಮದುವೆಯನ್ನು ಕ್ರಿಮಿನಲ್ ಅಪರಾಧವನ್ನಾಗಿ ಕೇಂದ್ರ ಸರಕಾರ ಮಾಡುತ್ತಿದೆ – ಯೆಚೂರಿ
ತ್ರಿವಳಿ ತಲಾಕ್ ಕಾನೂನಿನ ಮೂಲಕ ಮದುವೆಯನ್ನು ಕ್ರಿಮಿನಲ್ ಅಪರಾಧವನ್ನಾಗಿ ಕೇಂದ್ರ ಸರಕಾರ ಮಾಡುತ್ತಿದೆ – ಯೆಚೂರಿ
ಮಂಗಳೂರು ಜನವರಿ 2: ಸಿಪಿಎಂ ರಾಜ್ಯ ಸಮ್ಮೇಳನ ಪ್ರಯುಕ್ತ ಮೂಡುಬಿದಿರೆ ಆಯೋಜಿಸಲಾಗಿರುವ ಸಿಪಿಎಂ ರಾಜ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಪಿಎಂನ ಪಾಲಿಟ್ ಬ್ಯುರೋ ಸದಸ್ಯ ಸಿತಾರಾಂ ಯಚೂರಿ ತ್ರಿವಳಿ ತಲಾಕ್ ಕಾನೂನು ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈಗ ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ಕಾನೂನು ಜಾರಿಗೆ ಹೊರಟಿದೆ. ಏಕಾಏಕಿ ತಲಾಕ್‌ಗೆ ಸಿಪಿಎಂ ಕೂಡ ವಿರೋಧವಿದೆ. ಆದರೆ ಬಿಜೆಪಿ ಸರ್ಕಾರ ಈ ಹೊಸ ಕಾನೂನಿನ ಮೂಲಕ ಮದುವೆ ಎನ್ನುವ ಸಾಮಾಜಿಕ ಸಂಬಂಧವನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಲು ಕೇಂದ್ರ ಸರಕಾರ ಹೊರಟಿದೆ ಎಂದು ಅವರು ದೂರಿದರು. ತ್ರಿವಳಿ ತಲಾಕ್ ನೀಡುವವರನ್ನು 3ವರ್ಷ ಜೈಲಿಗೆ ಕಳಿಸುತ್ತೆವೆ ಎನ್ನುತ್ತಾರೆ. ಆ ಸಂದರ್ಭದಲ್ಲಿ ಅವರ ಪತ್ನಿ- ಮಕ್ಕಳ ಹೊಣೆಗಾರಿಕೆ ನೋಡುವವರು ಯಾರು? ಅವರಿಗೆ ಪರಿಹಾರವೇನೆಂದು ಎಲ್ಲೂ ಹೇಳಿಲ್ಲ ಎಂದು ಅವರು ಅಸಮಾಧಾನ ವ್ಯಕ್ತ ಪಡಿಸಿದರು.
ಕೇಂದ್ರ ಸರ್ಕಾರವೇ ಧರ್ಮದ ಆಧಾರದಲ್ಲಿ ಯುದ್ಧ ಸಾರಲು ಹೊರಟಿದೆ. ರಾಜಕೀಯ ದಾಳಿ, ಹಿಂಸೆಗಳಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರು ತೊಡಗಿದ್ದಾರೆ. ದೇಶದ ಹಿಂಸಾಚಾರಗಳನ್ನು ಆರೆಸ್ಸೆಸ್ ನಡೆಸುತ್ತಿದೆ ಎಂದು ಎಲ್ಲ ಪ್ರಕರಣಗಳ ನ್ಯಾಯಾಂಗ ತನಿಖೆಗಳು ಬಹಿರಂಗಗೊಳಿಸಿವೆ. ದಾಳಿ ಮಾಡೋರು ಅವರು, ಆದರೆ ಅದನ್ನು ಕಮ್ಯೂನಿಸ್ಟರ ಮೇಲೆ ಹೇರುತ್ತಿದ್ದಾರೆ ಎಂದು ಯೆಚೂರಿ ಕಿಡಿಕಾರಿದರು.