DAKSHINA KANNADA
ಭಯೋತ್ಪಾದಕರ ಕಾಮತೃಷೆ ತೀರಿಸಲು ಪಿಎಫ್ಐನಿಂದ ಹಿಂದೂ ಹೆಣ್ಣುಮಕ್ಕಳ ಲವ್ ಜಿಹಾದ್
ಭಯೋತ್ಪಾದಕರ ಕಾಮತೃಷೆ ತೀರಿಸಲು ಪಿಎಫ್ಐನಿಂದ ಹಿಂದೂ ಹೆಣ್ಣುಮಕ್ಕಳ ಲವ್ ಜಿಹಾದ್
ಪುತ್ತೂರು ಜನವರಿ 2: ಲವ್ ಜಿಹಾದ್ ಮೂಲಕ ಪಿಎಫ್ಐ ಹಿಂದೂ ಹೆಣ್ಣು ಮಕ್ಕಳನ್ನು ವಿದೇಶಗಳಲ್ಲಿರುವ ಭಯೋತ್ಪಾದಕರ ಕಾಮತೃಷೆ ತೀರಿಸಲು ಬಳಸುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಸತ್ಯಜಿತ್ ಸುರತ್ಕಲ್ ಆರೋಪಿಸಿದ್ದಾರೆ.
ಹಿಂದೂ ಮುಖಂಡರ ಹಾಗೂ ಸಂಘಟನೆಗಳ ಮೇಲೆ ಪುತ್ತೂರು ಸಂಪ್ಯ ಪೋಲೀಸರು ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪುತ್ತೂರಿನಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಮುಸ್ಲಿಂ ಸಮಾಜದಿಂದ, ಕ್ರೈಸ್ತ ಮಿಷನರಿಗಳಿಂದ, ಪೋಲೀಸ್ ಅಧಿಕಾರಿಗಳಿಂದ ಹೀಗೆ ಎಲ್ಲಾ ಕಡೆಯಿಂದಲೂ ಹಿಂದೂ ಸಮಾಜದ ಮೇಲೆ ದೌರ್ಜನ್ಯಗಳಾಗುತ್ತಿದೆ. ದೇಶದ್ರೋಹಿ ಮುಸ್ಲಿಂ ಸಂಘಟನೆಯಾದ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಡೆಸುವ ದೇಶದ್ರೋಹಿ ಕೆಲಸಗಳನ್ನು ಹುರಿದುಂಬಿಸುವ ಕೆಲಸವನ್ನು ಕರ್ನಾಟಕದ ಸಿದ್ಧರಾಮಯ್ಯ ಸರಕಾರ ಮಾಡುತ್ತಿದ್ದು, ಇದಕ್ಕೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕೂಡಾ ಸಾಥ್ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಹಿಂದೂಗಳ ಸಹನೆಗೂ ಒಂದು ಮಿತಿ ಇದ್ದು, ಇದೇ ರೀತಿಯ ದೌರ್ಜನ್ಯ ಮುಂದುವರಿದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಸರಕಾರವೇ ನೇರ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದರು.
You must be logged in to post a comment Login