LATEST NEWS
ಇಲ್ಲಿ ಮರಗಳಿಗೂ ಮದುವೆ ಮಾಡಿಸಲಾಗುತ್ತದೆ….!
ಇಲ್ಲಿ ಮರಗಳಿಗೂ ಮದುವೆ ಮಾಡಿಸಲಾಗುತ್ತದೆ….!
ಮಂಗಳೂರು ಜನವರಿ 29: ಪ್ರಕೃತಿಯನ್ನು ಆರಾಧಿಸುವ ತುಳುನಾಡಿನಲ್ಲಿ ಹಲವು ರೀತಿಯ ಪ್ರಕೃತಿ ಸಂಬಂಧಿಸಿದ ಆಚರಣೆಗಳು ನಡೆಯುತ್ತದೆ. ಇಂಥಹುದೇ ಒಂದು ಆಚರಣೆ ಅಶ್ವಥ ಹಾಗೂ ನೆಲ್ಲಿಕಾಯಿ ಮರಗಳ ವಿವಾಹವಾಗಿದೆ.
ಮನುಷ್ಯರಲ್ಲಿ ಯಾವ ರೀತಿಯಾಗಿ ವಿವಾಹವಾಗುತ್ತದೋ, ಅದೇ ರೀತಿಯಲ್ಲಿ ಈ ಮರಗಳ ವಿವಾಹವನ್ನೂ ಶಾಸ್ತ್ರಬದ್ಧವಾಗಿ ಮಾಡಲಾಗುತ್ತದೆ. ಇಂಥಹುದೇ ಒಂದು ವಿವಾಹ ಪುತ್ತೂರಿನ ಬನ್ನೂರಿನ ಶಿವ ಪಾರ್ವತಿ ಮಂದಿರದಲ್ಲಿ ನಡೆದಿದೆ.
ಅಶ್ವಥ ಮರ ವರನಾಗಿ, ನೆಲ್ಲಿ ಕಾಯಿ ಗಿಡವನ್ನು ವಧುವನ್ನಾಗಿ ಅಲಂಕರಿಸಲಾಗುತ್ತದೆ. ವಧುವಿನ ದಿಬ್ಬಣದೊಂದಿಗೆ ವಿವಾಹದ ಕಟ್ಟಪಾಡು ಆರಂಭಗೊಂಡು ಎರಡೂ ಗಿಡಗಳಿಗೆ ತಾಳಿಕಟ್ಟುವ ಸಂಪ್ರದಾಯ ಸೇರಿದಂತೆ ಎಲ್ಲಾ ಆಚರಣೆಗಳನ್ನೂ ಶಾಸ್ತ್ರೋಸ್ತವಾಗಿ ಮಾಡಲಾಗಿದೆ.