DAKSHINA KANNADA
ಚಲಿಸುತ್ತಿದ್ದ ಲಾರಿಯ ಮೇಲೆ ಬಿದ್ದ ಮರ ಸಂಚಾರ ಅಸ್ತವ್ಯಸ್ತ

ಚಲಿಸುತ್ತಿದ್ದ ಲಾರಿಯ ಮೇಲೆ ಬಿದ್ದ ಮರ ಸಂಚಾರ ಅಸ್ತವ್ಯಸ್ತ
ಬೆಳ್ತಂಗಡಿ ಜುಲೈ 9: ಮಂಗಳೂರು-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಸಮೀಪದ ಟಿ. ಬಿ. ಕ್ರಾಸ್ ಎಂಬಲ್ಲಿ ಚಲಿಸುತ್ತಿದ್ದ ಲಾರಿಯ ಮೇಲೆ ಮರ ಬಿದ್ದು ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆ ಸಂಚಾರದಲ್ಲಿ ವ್ಯತ್ಯಯವಾಯಿತು.
ಸೋಮವಾರ ಮಧ್ಯಾಹ್ನ ಟಿ. ಬಿ. ಕ್ರಾಸ್ ಬಳಿ ಉಜಿರೆ ಕಡೆಗೆ ಹೋಗುತ್ತಿದ್ದ ಲಾರಿಯ ಮೇಲೆ ಮರ ಬಿದ್ದಿದೆ. ಲಾರಿ ಒಳಗಿದ್ದವರಿಗೆ ಯಾವುದೇ ಹಾನಿ ಸಂಭವಿಸಲಿಲ್ಲ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದ ಕಾರಣ ಎರಡು ಕಡೆಯಿಂದಲೂ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಮರವನ್ನು ತೆರವು ಗೊಳಿಸಿದ ಸಾರ್ವಜನಿಕರು ವಾಹನ ಸಂಚಾರಕ್ಕೆ ಮತ್ತೆ ಅನುವು ಮಾಡಿ ಕೊಟ್ಟರು.
ಲಾರಿ ಮೇಲೆ ಮರ ಬಿದ್ದ ಸ್ಥಳದಲ್ಲೇ ತೆರವು ಮಾಡಿದ ಒಂದು ಗಂಟೆಯ ಬಳಿಕ ಮತ್ತೆ ಮರವೊಂದು ರಸ್ತೆಗೆ ಬಿದ್ದಿದೆ. ಅದನ್ನೂ ಸಾರ್ವಜನಿಕರೇ ತೆರವು ಮಾಡಿ ವಾಹನ ಸಂಚಾರಕ್ಕೆ ಮುಕ್ತವಾಗಿಸಿದ್ದಾರೆ.