ನಟ ಸದಾಶಿವ ಸಾಲಿಯಾನ್ ನಿಧನ
ಉಡುಪಿ ಜುಲೈ 9: ಮುಂಬಾಯಿ ಹವ್ಯಾಸಿ ನಾಟಕ ರಂಗದಲ್ಲಿ ಹುಟ್ಟಿ ಬೆಳೆದು ಬಹು ಜನಮನ್ನಣೆಗೆ ಪಾತ್ರರಾಗಿ ಮುಂದೆ ಕನ್ನಡ, ತುಳು ಚಿತ್ರರಂಗದಲ್ಲಿ ಮಿಂಚಿದ ಮಂಬಯಿ ಕನ್ನಡಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದ ನಮ್ಮೆಲ್ಲರ ಹೆಮ್ಮೆಯ ಕಲಾವಿದ ಸದಾಶಿವ ಸಾಲ್ಯಾನ್ ಭಾನುವಾರ ಮುಂಬೈನಲ್ಲಿ ನಿಧನರಾದರು.
ಉಡುಪಿಯ ತೆಂಕ ಎರ್ಮಾಳ್ ನವರಾಗಿದ್ದ ಸದಾಶಿವ ಸಾಲಿಯಾನ್ ಕಿರಿ ವಯಸ್ಸಿನಲ್ಲಿಯೇ ಮುಂಬೈಗೆ ತೆರಳಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದರು,
ಸುಮಾರು 50 ಚಿತ್ರಗಳಲ್ಲಿ ನಟಿಸಿದ ಏಕೈಕ ಮುಂಬಾಯಿ ರಂಗ ಕಲಾವಿದನೆಂಬ ಹೆಗ್ಗಳಿಗೆ ಪಾತ್ರರಾಗಿದ್ದ ಇವರು ಮನೋಜ್ಞ ಅಭಿನಯವನ್ನು ನಾವಿಂದು ಭಾಗ್ಯವಂತೆದಿ, ಬದ್ಕೆರೆ ಬುಡ್ಲೆ, ಪಟ್ಟಾಯಿ ಪಿಲಿ, ಸತ್ಯಓಲುಂಡು, ದಾರೆದ ಸೀರೆ, ಸಮರ ಸಿಂಹ, ಇವಳಂತಹೆಂಡ್ತಿ, ಅನಾಥ ರಕ್ಷಕ, ಸಿಡಿದೆದ್ದ ಪಾಂಡವರು, ಕಾಲೇಜು ರಂಗ , ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ ಮೊದಲಾದ ಚಿತ್ರಗಳ ಮೂಲಕ ಸ್ಮರಿಸಿ ಕೊಳ್ಳಬಹುದು.