Connect with us

LATEST NEWS

ನಕಲಿ ಮಂಗಳ ಮುಖಿಯರ ಜನ್ಮಜಾಲಾಡಿದ ಸೌರಜ್ – ವೈರಲ್ ಆದ ವಿಡಿಯೋ

ನಕಲಿ ಮಂಗಳ ಮುಖಿಯರ ಜನ್ಮಜಾಲಾಡಿದ ಸೌರಜ್ – ವೈರಲ್ ಆದ ವಿಡಿಯೋ

ಮಂಗಳೂರು ಅಕ್ಟೋಬರ್ 4 : ಮಂಗಳೂರಿನಲ್ಲಿ ಅದರಲ್ಲೂ ನಗರದಲ್ಲಿ ನಕಲಿ ಮಂಗಳ ಮುಖಿಯರ ಹಾವಳಿ ಹೆಚ್ಚಾಗುತ್ತಿದೆ . ಮಂಗಳ ಮುಖಿಯರಂತೆ ವೇಷಧರಿಸಿ ಹಣಕ್ಕಾಗಿ ಜನರನ್ನು ಪೀಡಿಸುತ್ತಿರುವ ದೃಶ್ಯಗಳು ನಗರದಲ್ಲಿ ಸಾಮಾನ್ಯವಾಗುತ್ತಿದೆ.

ಇದರಿಂದ ಬೇಸತ್ತ ಸಾಮಾಜಿಕ ಕಾರ್ಯಕರ್ತರೊಬ್ಬರು ಮಂಗಳೂರಿನಲ್ಲಿ ಈ ನಕಲಿ ಮಂಗಳ ಮುಖಿಯರ ಜನ್ಮಜಾಲಾಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣ ವೈರಲ್ ಆಗಿದೆ.

ಈ ಹಿಂದೆ ತಮ್ಮ ವಿಶಿಷ್ಟ ರೀತಿಯ ನಿಷ್ಠೂರ ಕ್ರಮಗಳ ಹಲವಾರು ಸಾಮಾಜಿಕ ಕಾರ್ಯಗಳಿಂದ ಗುರುತಿಸಿ ಕೊಂಡಿರುವ ಮಂಗಳೂರಿನ ಸೌರಜ್ ಈಗ ಈ ನಕಲಿ ಮಂಗಳ ಮುಖಿಯರ ಅಸಲಿಯತ್ತು ಬಯಲು ಮಾಡಿದ್ದಾರೆ.

ನಗರದ ಕದ್ರಿ ಉದ್ಯಾನ ವನಕ್ಕೆ ಬರುವ ಪ್ರವಾಸಿಗರನ್ನು ಕಾಡುವ ಈ ನಕಲಿ ಮಂಗಳ ಮುಖಿಯರ ಹಿಡಿದು ಅವರ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ.

ಕದ್ರಿ ಪಾರ್ಕ್ ಗೆ ದಾಳಿ ಇಟ್ಟ ಸೌರಜ್ ಕುಡಿದು ತೂರಾಡುತ್ತಿದ್ದ ಜನರನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಇಬ್ಬರು ನಕಲಿ ಮಂಗಳ ಮುಖಿಯರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಅಲ್ಲದೇ ಈ ನಕಲಿ ಮಂಗಳ ಮುಖಿಯರ ಅಸಲಿಯತ್ತನ್ನು ಕ್ಯಾಮರಾದಲ್ಲಿ ಸೆರೆಹಿಡಿದ್ದಾರೆ. ತಲೆಗೆ ಬಣ್ಣ ಬಣ್ಣದ ಟೋಪನ್ ಹಾಕಿ ಯುವತಿಯರಂತೆ ಡ್ರೆಸ್ ಮಾಡಿ ಕೊಂಡು ಬರುವ ಈ ನಕಲಿ ಮಂಗಳ ಮುಖಿಯರು ನಿಜಾಂಶ ಬಯಲಾಗಿದೆ.

ಸೌರಜ್ ಪತ್ತೆ ಹಚ್ಚಿದ ಈ ನಕಲಿ ಮಂಗಳ ಮುಖಿಯರಲ್ಲಿ ಇಬ್ಬರು ಪುರುಷರಾಗಿದ್ದು ಈ ಪೈಕಿ ಒಬ್ಬತನ ಹೆಸರು ಗೋಪಿ ಎಂದಾಗಿದೆ. ಮತ್ತೋಬ್ಬ ತಮ್ಮ ಸತ್ಯಾಂಶ ಬಯಲಾಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ.

ಜನರನ್ನು ಕಾಡಿ ಹಣ ಪೀಕಿಸುವ ಈ ನಕಲಿ ಮುಖಿಯರು ಕಂಟಪೂರ್ತಿ ಕುಡಿದು ಬಂದಿರುವುದು ಪತ್ತೆಯಾಗಿದ್ದು ವಿಚಾರಿಸಿದಾಗ ತಾವು ಮಡಿಕೇರಿ ಅವರು ಎಂದು ಹಿಂದಿ ಭಾಷೆಯಲ್ಲಿ ಈ ನಕಲಿಗಳು ಉತ್ತರಿಸಿದ್ದಾರೆ.

ಆದರೆ ಇವರೆಲ್ಲ ಮಹಾರಾಷ್ಟ್ರ ದವರೆಂದು ಹೇಳಲಾಗಿದ್ದು ಇವರ ಹಾವಳಿಯಿಂದ ಮಂಗಳೂರಿನ ನೆಮ್ಮದಿ ಹಾಳಾಗುತ್ತಿದೆ. ದುಡಿದು ತಿನ್ನಲು ಒಲ್ಲದ ಇವರಿಗೆ ಹಣ ನೀಡದೆ ಕಂಡಲಿಂದ ಓಡಿಸುವಂತೆ ಸೌರಜ್ ಸಾರ್ವಜನಿಕರನ್ನು ವಿನಂತಿಸಿದ್ದಾರೆ.

VIDEO

https://youtu.be/j4N4rMa7iGQ

Share Information
Continue Reading
Advertisement
Click to comment

Leave a Reply

Your email address will not be published. Required fields are marked *