LATEST NEWS
ಕಂದಮ್ಮನ ಚಿಕಿತ್ಸೆಗೆ ನೆರವಾದ ಲಿಂಗತ್ವ ಅಲ್ಪಸಂಖ್ಯಾತರು…
ಉಡುಪಿ: ಎರಡೂವರೆ ವರ್ಷದ ಕಂದಮ್ಮನ ಚಿಕಿತ್ಸಾ ವೆಚ್ಚ ಭರಿಸಲು ಉಡುಪಿಯ ಲಿಂಗತ್ವ ಅಲ್ಪಸಂಖ್ಯಾತರು ಸಾರ್ವಜನಿಕರಿಂದ ಸಂಗ್ರಹಿಸಿದ್ದ ಹಣವನ್ನು ಆರಾಧ್ಯ ಪೋಷಕರಿಗೆ ಹಸ್ತಾಂತರಿಸಲಾಯಿತು.
ಬೆಳ್ತಂಗಡಿ ತಾಲ್ಲೂಕಿನ ಮಡಂತ್ಯಾರುವಿನಲ್ಲಿರುವ ಮಗುವಿನ ನಿವಾಸಕ್ಕೆ ತೆರಳಿದ ಮಂಗಳೂರಿನ ನವಸಹಜ ಸಂಘಟನೆ ಹಾಗೂ ಉಡುಪಿ ಆಶ್ರಯ ಸಮುದಾಯ ಸಂಘಟನೆ ಸದಸ್ಯರು ₹ 70,000ದ ಚೆಕ್ ಅನ್ನು ಪೋಷಕರಿಗೆ ನೀಡಿದರು.
ಮಗುವಿನ ಪೋಷಕರು ಸಮುದಾಯದ ಸಮಾಜಮುಖಿ ಕಾರ್ಯಕ್ಕೆ ಸಂತಸಪಟ್ಟರು. ಇದೇವೇಳೆ ಮಗು ಶೀಘ್ರ ಗುಣಮುಖವಾಗಲಿದೆ ಎಂದು ಹಾರೈಸಿ ಬಂದೆವು ಎಂದು ಆಶ್ರಯ ಸಂಘಟನೆಯ ಸಮೀಕ್ಷಾ ತಿಳಿಸಿದರು. ಆಶ್ರಯ ಸಂಸ್ಥೆ ಹಲವು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗೆ ಶ್ರಮಿಸುತ್ತಿದೆ. ಈಚೆಗೆ ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸಮೀಕ್ಷಾ ನೇತೃತ್ವದ ತಂಡ ಉಡುಪಿ, ಮಣಿಪಾಲ್ ಹಾಗೂ ಕಾರ್ಕಳದಲ್ಲಿ ಸಾರ್ವಜನಿಕರಿಂದ ₹ 21,000 ದೇಣಿಗೆ ಸಂಗ್ರಹಿಸಿತ್ತು.