Connect with us

    LATEST NEWS

    ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಮತ್ತೆ ಏರಿಕೆ….!!

    ನವದೆಹಲಿ ನವೆಂಬರ್ 20: ಎರಡು ತಿಂಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ದೇಶದಲ್ಲೂ ಪೆಟ್ರೋಲ್​ ದರ ಪ್ರತಿ ಲೀಟರಿಗೆ 17 ಪೈಸೆ ಮತ್ತು ಡೀಸೆಲ್ ದರ ಪ್ರತಿ ಲೀಟರಿ 22 ಪೈಸೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 81.06 ರೂಪಾಯಿ ಇದ್ದಿದ್ದು, ಇದೀಗ 81.23 ರೂಪಾಯಿ ಆಗಿದೆ. ಡೀಸೆಲ್​ ದರ ಪ್ರತಿ ಲೀಟರ್​ಗೆ 70.46 ರೂಪಾಯಿ ಇದ್ದದ್ದು 70.68 ರೂಪಾಯಿ ಆಗಿದೆ.


    ಸೆಪ್ಟೆಂಬರ್ 22ರ ನಂತರ ಪೆಟ್ರೋಲ್ ಬೆಲೆಯಲ್ಲಿ ಇದೇ ಮೊದಲ ಬಾರಿ ಏರಿಕೆಯಾಗಿದ್ದು, ಅಕ್ಟೋಬರ್ 2 ರಿಂದ ಡಿಸೆಲ್ ದರಗಳು ಬದಲಾಗಿರಲಿಲ್ಲ.  ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ ನಿನ್ನೆ ಏಳು ಪೈಸೆ ಹೆಚ್ಚಾಗಿದ್ದು 83.69 ರೂಪಾಯಿ ಇದ್ದದ್ದು 83.75 ರೂಪಾಯಿ ಆಗಿತ್ತು. ಇಂದು ಮತ್ತೆ 16 ಪೈಸೆ ಹೆಚ್ಚಳವಾಗಿದ್ದು 83.92 ರೂಪಾಯಿ ಆಗಿದೆ. ಇದೇ ರೀತಿ, ಡೀಸೆಲ್ ದರವೂ ಪ್ರತಿ ಲೀಟರಿಗೆ ನಿನ್ನೆ ಆರು ಪೈಸೆ ಹೆಚ್ಚಳವಾಗಿ 74.63 ರೂಪಾಯಿಯಿಂದ 74.69 ರೂಪಾಯಿಗೆ ಏರಿತ್ತು. ಇಂದು ಮತ್ತೆ 22 ಪೈಸೆ ಹೆಚ್ಚಾಗಿದ್ದು, ಪ್ರತಿ ಲೀಟರ್ ದರ 74.91 ರೂಪಾಯಿ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply