LATEST NEWS
ಬೈಕ್ ಸವಾರನ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಚಿನ್ನದ ಸರ ಸುಲಿಗೆ ಮಾಡಿದ ಮಂಗಳಮುಖಿ ಅರೆಸ್ಟ್

ಮಂಗಳೂರು: ನಂತೂರಿನ ಸಮೀಪ ಬೈಕ್ ಸವಾರನೊಬ್ಬನನ್ನು ನಿಲ್ಲಿಸಿ ಆತನಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಮಂಗಳಮುಖಿಯನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಮೈಸೂರಿನ ಪ್ರಸ್ತುತ ಬೆಂಗಳೂರಿನ ನಿವಾಸಿ ಅಭಿಷೇಕ್ ಯಾನೆ ಗೊಂಬೆ ಯಾನೆ ಅನಾಮಿಕ (27) ಬಂಧಿತ ಆರೋಪಿಯಾಗಿದ್ದು, ಈ ಮಂಗಳಮುಖಿಯಿಂದ ಸುಮಾರು 71 ಗ್ರಾಂ ತೂಕದ 3 ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗಣೇಶ್ ಶೆಟ್ಟಿ ಎಂಬವರು ಎರಡು ತಿಂಗಳ ಹಿಂದೆ ತನ್ನ ಬೈಕ್‌ನಲ್ಲಿ ನಂತೂರು ಪದವಿನಿಂದ ಬಿಎಸ್‌ಎನ್‌ಎಲ್ ಎಕ್ಸೇಂಜ್ ಬಳಿಯ ರಸ್ತೆಯಲ್ಲಿ ತೆರಳುತ್ತಿದ್ದಾಗ ಹಠಾತ್ ಆಗಿ ಅಡ್ಡ ಬಂದ ಮಂಗಳಮುಖಿ ಗಣೇಶ್ ಶೆಟ್ಟಿಯ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ 24 ಗ್ರಾಂ ತೂಕದ ಚಿನ್ನದ ಸರ ಸುಲಿಗೆ ಮಾಡಿದ್ದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.