Connect with us

LATEST NEWS

ಜಾರ್ಖಂಡ್ – ರೈಲ್ವೆ ಹಳಿ ಬಳಿ ಮರಿಗೆ ಜನ್ಮ ನೀಡಿದ ಆನೆ – 2 ಗಂಟೆ ರೈಲು ನಿಲ್ಲಿಸಿದ ಲೋಕೋಪೈಲೆಟ್

ಜಾರ್ಖಂಡ್, ಜುಲೈ 10: ರೈಲ್ವೆ ಹಳಿ ಸಮೀಪ ಆನೆಯೊಂದು ಮರಿಗೆ ಜನ್ಮ ನೀಡುತ್ತಿರುವ ಸಂದರ್ಭ ಲೋಕೋಪೈಲೆಟ್ ಟ್ರೈನ್ ನ್ನು ಬರೋಬ್ಬರಿ 2 ಗಂಟೆಗಳ ಕಾಲ ನಿಲ್ಲಿಸಿ ಆನೆ ಮರಿ ಹಾಕುವವರೆಗೆ ಕಾದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ರೈಲ್ವೆ ಹಳಿ ಪಕ್ಕದಲ್ಲಿ ಆನೆಯೊಂದು ಮರಿಗೆ ಜನ್ಮ ನೀಡಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ರೈಲು ಎರಡು ಗಂಟೆಗಳ ಕಾಲ ನಿಂತಿತ್ತು. ಆನೆಗೆ ಸುರಕ್ಷಿತವಾಗಿ ಮರಿಗೆ ಜನ್ಮ ನೀಡಲು ಅವಕಾಶ ಮಾಡಿಕೊಡಲಾಯಿತು. ಬಳಿಕ ಮರಿ ಆನೆಯೊಂದಿಗೆ ತಾಯಿ ಆನೆ ಕೂಡ ಕಾಡಿನ ಕಡೆಗೆ ಸಾಗಿತ್ತು. ಈ ಹೃದಯಸ್ಪರ್ಶಿ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಈ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *