LATEST NEWS
ಟ್ರಾಯ್ ಡೆಡ್ ಲೈನ್ – ಡಿಸೆಂಬರ್ 1 ರಿಂದ ಒಟಿಪಿ ಬಂದ್ ಸಾಧ್ಯತೆ
ದೆಹಲಿ ನವೆಂಬರ್ 27: ಮೊಬೈಲ್ ಗಳಲ್ಲಿ ಒಟಿಪಿ ಮೂಲಕ ನಡೆಯುವ ಅಕ್ರಮ ತಡೆಯಲು ಪೋನ್ ಗಳಿಗೆ ಬರುವ ಒಟಿಪಿ ಮೂಲಗಳನ್ನು ಪತ್ತೆ ಮಾಡಲು ಅನುವು ಮಾಡಿಕೊಡಬೇಕು ಎಂದು ದೂರ ಸಂಪರ್ಕ ನಿಯಂತ್ರಣ ಮಂಡಳಿ ನೀಡಿದ ಗಡುವು ನವೆಂಬರ್ 30 ರಂದು ಮುಕ್ತಾಯವಾಗಲಿದೆ.
ಅಷ್ಟರೊಳಗೆ ಟೆಲಿಕಾಂ ಕಂಪನಿಗಳು ಇದಕ್ಕೆ ಒಪ್ಪಿಗೆ ನೀಡಿ ಜಾರಿ ಮಾಡದೇ ಹೋದರೆ ಡಿಸೆಂಬರ್ 1ರಿಂದ ಒಟಿಪಿ ಸ್ಥಗಿತವಾಗಲಿದೆ. ಒಟಿಪಿ ಸ್ಥಗಿತಗೊಂಡರೆ ಬ್ಯಾಂಕಿಂಗ್ ಸೇರಿ ವಿವಿಧ ವ್ಯವಹಾರಗಳಲ್ಲಿ ಒಟಿಪಿ ಮೇಲೇ ಅವಲಂಬಿತ ಜನರಿಗೆ ತೊಂದರೆ ಆಗಲಿದೆ. ಅಕ್ರಮವಾಗಿ ಒಟಿಪಿ ಕೇಳಿ ಹಣ ಲಪಟಾಯಿಸುವ ವಂಚನೆಗಳು ನಡೆಯುತ್ತಿರುವ ಕಾರಣ ಟ್ರಾಯ್, ಇಂಥ ಒಟಿಪಿಗಳ ಮೂಲ ಪತ್ತೆ ಮಾಡುವ ನಿಯಮ ಜಾರಿಗೆ ಈ ಹಿಂದೆ ಹಲವು ಬಾರಿ ಗಡುವು ನೀಡಿತ್ತು. ಆದರೆ ವೊಡಾಫೋನ್, ಏರ್ ಟೆಲ್, ಜಿಯೋ ಹಾಗೂ ಬಿಎಸ್ಸೆನ್ನೆಲ್ ಕೋರಿಕೆ ನಂತರ ಅದನ್ನು ನ.30ಕ್ಕೆ ವಿಸ್ತರಿಸಿತ್ತು.