Connect with us

LATEST NEWS

ಟಿಂಟ್ ಗ್ಲಾಸ್ ಹಿಂದೆ ಬಿದ್ದ ಮಂಗಳೂರು ಪೊಲೀಸರು 500 ಅಧಿಕ ವಾಹನಗಳ ಮೇಲೆ ಕೇಸ್

ಟಿಂಟ್ ಗ್ಲಾಸ್ ಹಿಂದೆ ಬಿದ್ದ ಮಂಗಳೂರು ಪೊಲೀಸರು 500 ಅಧಿಕ ವಾಹನಗಳ ಮೇಲೆ ಕೇಸ್

ಮಂಗಳೂರು ಅಗಸ್ಟ್ 30: ಡ್ರಗ್ ವಿರುದ್ದ ಸಮರ ಸಾರಿರುವ ನಗರ ಪೊಲೀಸ್ ಆಯುಕ್ತರಾದ ಡಾ. ಹರ್ಷ . ಸುಪ್ರೀಂಕೋರ್ಟ್ ಆದೇಶವಿದ್ದರೂ ಕೂಡ ವಾಹನಗಳಲ್ಲಿ ಟಿಂಟ್ ಗ್ಲಾಸ್ ಬಳಸುತ್ತಿರುವ ವಿರುದ್ದ ಸಮರ ಸಾರಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶವಿದ್ದರೂ ಮತ್ತೆ ಹಳೇ ಚಾಳಿಯಲ್ಲಿ ಕಾನೂನಿನ ಭಯವಿಲ್ಲದೆ ಟಿಂಟ್ ಗ್ಲಾಸ್ ಹಾಕಿ ಓಡಾಡುತ್ತಿರುವವರ ಹಿಂದೆ ಈಗ ಮಂಗಳೂರು ಪೊಲೀಸರು ಬಿದ್ದಿದ್ದಾರೆ. ನಗರದಲ್ಲಿ ಮಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟಿಂಟ್ ಹಾಕಿದ ವಾಹಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ನಗರ ಸಂಚಾರಿ ಪೊಲೀಸರು ತಗೊಳ್ಳುತ್ತಿದ್ದು, ಕಳೆದ ನಾಲ್ಕು ದಿನಗಳಲ್ಲಿ 498 ವಾಹನಗಳ ಮೇಲೇ ಪ್ರಕರಣ ದಾಖಲು ಮಾಡಿದ್ದಲ್ಲದೇ ಅವರು ಹಾಕಿದ ಟಿಂಟ್‌ಗಳನ್ನು ತೆಗೆಸುವ ಮೂಲಕ ದಿಟ್ಟತನ ಮೆರೆದಿದ್ದಾರೆ.

ಅದೂ ಅಲ್ಲದೇ 49800 ರೂಪಾಯಿ ದಂಡವನ್ನೂ ವಸೂಲಿ ಮಾಡಿದ್ದಾರೆ. ಟಿಂಟ್ ಗ್ಲಾಸ್ ಹಾಕಿ ಓಡಾಡುವವರು ಕೂಡಲೇ ಟಿಂಟ್ ಸ್ಟಿಕರ್‌ಗಳನ್ನು ತೆರವು ಮಾಡಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಡಾ, ಹರ್ಷ ಅವರು ಸೂಚಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *