KARNATAKA
ಬೆಂಗಳೂರಿನಲ್ಲಿದ್ದಾರೆ ಬರೋಬ್ಬರಿ 3.20 ಲಕ್ಷ ಟ್ರಾಫಿಕ್ ಫೈನ್ ಇರೋ ವ್ಯಕ್ತಿ..!!
ಬೆಂಗಳೂರು ಫೆಬ್ರವರಿ 11: ಟ್ರಾಫಿಕ್ ರೂಲ್ಸ್ ಬ್ರೆಕ್ ಮಾಡುವುದರಲ್ಲಿ ಬೆಂಗಳೂರಿಗರು ವಿಶ್ವದಾಖಲೆ ಮಾಡಲು ಹೊರಟಿದ್ದಾರೆ. 50 ಸಾವಿರ ಬೆಲೆ ಬಾಳದೇ ಇರುವ ವಾಹನಗಳಿಗೆ ಲಕ್ಷಾಂತರ ರೂಪಾಯಿ ದಂಡ ಬೀಳುತ್ತಿದೆ. ಇದೇ ರೀತಿ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಆಕ್ಟಿವ್ ಹೊಂಡಾ ವಾಹನಕ್ಕೊಂದು ಬರೋಬ್ಬರಿ 3.20 ಲಕ್ಷ ದಂಡ ಬಿದ್ದಿದೆ.
ಓರ್ವ ಸವಾರ ಸಂಚಾರಿ ಪೊಲೀಸರ ಭಯವಿಲ್ಲದೆ, ಹೆಲ್ಮಟ್ ಧರಿಸದೆ, ಸಿಗ್ನಲ್ ಜಂಪ್ ಮಾಡಿ, ಒನ್ ವೇಯಲ್ಲಿ ಮೊಬೈಲ್ನಲ್ಲಿ ಮಾತಾಡಾಡಿಕೊಂಡು ಡ್ರೈವಿಂಗ್ ಮಾಡಿದ್ದಾನೆ. ಈತ ಬರೊಬ್ಬರಿ ನಗರದಲ್ಲಿ 300ಕ್ಕೂ ಅಧಿಕ ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, 3.20 ಲಕ್ಷ ರೂಪಾಯಿ ದಂಡ ಬಿದ್ದಿದೆ.
ಬೆಂಗಳೂರಿನ ಸುಧಾಮನಗರ ನಿವಾಸಿ ವೆಂಕಟ್ರಾಮನ್ ಎಂಬುವರ KA05KF7969 ನಂಬರಿನ ಆಕ್ಟಿವ್ ಹೊಂಡಾ ಸ್ಕೂಟರ್ ಮೇಲೆ 300ಕ್ಕೂ ಅಧಿಕ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿವೆ. ಇದಕ್ಕೆ ಸಂಚಾರಿ ಪೊಲೀಸರು 3 ಲಕ್ಷ ರೂ. ದಂಡ ವಿಧಿಸಿದ್ದಾರೆ. ಇವರು ಎಸ್ಆರ್ ನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ.
ವೆಂಕಟ್ರಾಮನ್ ಅವರು 3 ಲಕ್ಷ ರೂ. ದಂಡ ಕಟ್ಟಬೇಕಾಗಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಅವರ ಮನೆಗೆ ತೆರಳಿದ್ದು, ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಇದಕ್ಕೆ ವೆಂಕಟ್ರಾಮನ್ ಅವರು ಇಷ್ಟು ದಂಡ ಕಟ್ಟಲು ಆಗಲ್ಲ ಬೇಕಿದ್ದರೆ ಬೈಕ್ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಆಗ ಪೊಲೀಸರು ನಮಗೆ ಬೈಕ್ ಬೇಡ, ದಂಡ ಕಟ್ಟಿ ಇಲ್ಲ ಕೇಸ್ ಮಾಡುತ್ತೇವೆ ಎಂದಿದ್ದಾರೆ. ಸದ್ಯ ಸಂಚಾರಿ ಪೊಲೀಸರು ನೊಟೀಸ್ ನೀಡಿದ್ದು, ದಂಡ ಕಟ್ಟಿಲ್ಲ ಅಂದರೆ ಕೇಸ್ ಹಾಕಲು ನಿರ್ಧರಿಸಿದ್ದಾರೆ.