LATEST NEWS
ಸಮುದ್ರ ದಡದಲ್ಲಿ ಟನ್ ಗಟ್ಟಲೆ ಮೀನು
ಸಮುದ್ರ ದಡದಲ್ಲಿ ಟನ್ ಗಟ್ಟಲೆ ಮೀನು
ಉಡುಪಿ ಸೆಪ್ಟೆಂಬರ್ 5: ಮೀನು ಪ್ರಿಯರಿಗಿಂದು ಸುಗ್ಗಿ ಹಬ್ಬ. ಸಮುದ್ರದಲೆಗಳೊಂದಿಗೆ ದಡಕ್ಕೆ ಬಂದ ಮೀನುಗಳು ಇಂದು ಅಕ್ಷರಶಃ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು.
ಹೆಜಮಾಡಿ ಕೋಡಿಯಲ್ಲಿ ಐದು ರಂಪಣಿಗಳು ಮೀನುಗಾರಿಕೆ ನಡೆಸುತಿದ್ದು, ಎಲ್ಲೆಡೆ ಬೆಳ್ಮೀನು ಕಂಡುಬಂದಿದೆ. ಇಂದು ಬೆಳಗ್ಗೆಯಿಂದ ಮೀನುಗಾರಿಕೆಗೆ ಬಲೆ ಬೀಸಲು ಆರಂಭಿಸುತಿದ್ದಂತೆಯೇ ರಾಶಿರಾಸಿ ಮೀನುಗಳು ದಡ ಸೇರಿವೆ.
ಪ್ರತೀ ವರ್ಷ ಮೀನುಗಳು ದಡಕ್ಕೆ ಅಪ್ಪಳಿಸುವುದು ಸಾಮಾನ್ಯ ಆದ್ರೆ ಈ ಬಾರಿ ಟನ್ ಗಳ ಲೆಕ್ಕದಂತೆ ಒಂದು ಕಿಲೋಮೀಟರ್ ವರೆಗೂ ಮೀನುಗಳ ದಡಕ್ಕೆ ಅಪ್ಪಳಿಸಿದೆ. ಈ ಮೀನುಗಳನ್ನು ತಾ ಮುಂದು ನಾ ಮುಂದು ಎಂಬಂತೆ ಬುಟ್ಟಿ, ಗೋಣಿ, ರಿಕ್ಷಾ,ಟೆಂಪೋ, ವ್ಯಾನ್ ಗಳಲ್ಲಿ ಒಬ್ಬೊಬ್ಬರು ಟನ್ ಗಳಂತೆ ಮೀನುಗಳನ್ಜು ಕೊಂಡೊಯ್ದಿದ್ದಾರೆ. ಈ ಬಾರಿ ಈ ಲೆಕ್ಕದಲ್ಲಿ ಮೀನು ಸಿಕ್ಕಿರುವುದು ಹಬ್ಬದ ವಾತಾವರಣದಂತೆ ಕಂಡು ಬಂತು.