KARNATAKA
ಪೆಟ್ರೋಲ್ ಬಳಿಕ … ಶತಕ ಬಾರಿಸಿದ ಟೊಮೊಟೊ ಬೆಲೆ…!!

ಬೆಂಗಳೂರು: ಪೆಟ್ರೋಲ್ ಡಿಸೆಲ್ ಬೆಲೆಗಳು ಶತಕ ಬಾರಿಸಿದ ಬಳಿಕ ಇದೀಗ ತರಕಾರಿ ಬೆಲೆಗಳು ಕೂಡ ಶತಕದತ್ತ ಮುಖಮಾಡಿದ್ದು, ಮಳೆ ಅಬ್ಬರಕ್ಕೆ ಬೆಂಗಳೂರಿನಲ್ಲಿ 1 ಕೆಜಿ ಟೊಮೊಟೊ ಬೆಲೆ ಶತಕ ಬಾರಿಸಿದೆ.
ಕಳೆದ ಕೆಲವು ವಾರಗಳಿಂದ ಟೊಮೆಟೊ ಬೆಲೆ ಏರುಗತಿಯಲ್ಲಿದೆ, ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕಿಲೋ ಬೆಲೆ 98-100 ರೂ. ಮತ್ತು ಹಾಪ್‌ಕಾಮ್ಸ್ ಮಳಿಗೆಗಳಲ್ಲಿ 93 ರೂ. ಆಗಿದೆ.
ನವೆಂಬರ್ ನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಟೊಮೊಟೊ ಬೆಲೆ ಗಗನಕ್ಕೇರಿದೆ, ರಾಜ್ಯದ ಹಲವು ಭಾಗಗಳಲ್ಲಿ ಬೆಳೆದಿದ್ದ ಟೊಮೊಟೊ ಮಳೆಯಿಂದಾಗಿ ನಾಶವಾಗಿದೆ, ಇದರ ಜೊತೆಗೆ ಮಳೆಯಿಂದಾಗಿ ಟೊಮೊಟೊ ಗುಣಮಟ್ಟ ಕೂಡ ಹಾಳಾಗಿದೆ.
ಮಳೆಯಿಂದಾಗಿ ಬೆಲೆ ಹೆಚ್ಚಾಗಿದೆ. ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಟೊಮೆಟೊ ಬೆಲೆ 93 ರೂ ಇದ್ದು, ಮಳೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಬೆಲೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.
