KARNATAKA
ಗಗನಕ್ಕೇರಿದ ಟೊಮೇಟೊ ಬೆಲೆ…..!!
ಬೆಂಗಳೂರು ಜೂನ್ 27: ಮುಂಗಾರು ಮಳೆ ವಿಳಂಬ ಜೊತೆ ಸೈಕ್ಲೋನ್ ಪ್ರಭಾವದಿಂದಾಗಿ ಟೊಮೇಟೊ ಬೆಲೆ ಇದೀಗ ಗಗನಕ್ಕೇರಿದೆ. ದಿನನಿತ್ಯ ಅಡುಗೆಗೆ ಬೇಕಾದ ಟೊಮೇಟೊ ಬೆಲೆ ದಿಢೀರ್ ಏರಿಕೆಯಾಗಿದ್ದು, ಬಡವರು, ಮದ್ಯಮ ವರ್ಗದವರಿಗೆ ಕೈಗೆಟುಕದಂತಾಗಿದೆ.
ಒಂದು ಕೆಜಿ ಟೊಮೇಟೊ ಬೆಲೆ 80 ರಿಂದ 100 ರೂಪಾಯಿಗೆ ಮಾರಾಟವಾಗುತ್ತಿರುವುದು ಗ್ರಾಹಕರ ಕೈಸುಡುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 50-70 ರೂ.ಗೆ ಟೊಮೆಟೊ ದರ ಜಿಗಿದಿದ್ದು, ಸದ್ಯದಲ್ಲೇ 100 ರೂ.ಗೆ ಜಿಗಿದರೂ ಅಚ್ಚರಿಯಿಲ್ಲ ಎನ್ನುತ್ತಾರೆ ವರ್ತಕರು.
ಮೇ ಮತ್ತು ಜೂನ್ ತಿಂಗಳ ಆರಂಭದಲ್ಲಿ ಟೊಮೇಟೊಗೆ ಬೆಲೆ ಇರಲಿಲ್ಲ. ಆಗ ಕೆಜಿ ಟೊಮೇಟೊ ಕೇವಲ 30 ರಿಂದ 40 ರೂ.ಗೆ ಮಾರಾಟವಾಗಿತ್ತು. ಆದರೆ, ಕಳೆದ ಮೂರು ದಿನಗಳಿಂದ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ದೇಶಾದ್ಯಂತ ಬೆಲೆಯಲ್ಲಿಎರಡು ಪಟ್ಟು ಹೆಚ್ಚಳವಾಗಿದೆ. ಉತ್ತರ ಭಾರತದ ಕಡೆಗಳಲ್ಲಿ ಭಾರೀ ಮಳೆಯಿಂದ ಟೊಮೋಟೊ ನೆಲ ಕಚ್ಚಿದ್ದರೆ, ಕರ್ನಾಟಕ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮಳೆ ವಿಳಂಬ, ಅತಿಯಾದ ಉಷ್ಣಾಂಶ ಬೆಳೆ ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಈ ಬೆಲೆ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆಯಿದೆ.