LATEST NEWS
ಟಿಂಟೆಡ್ ಗ್ಲಾಸ್ ಹಾಕಿದ ವಾಹನದಲ್ಲಿ ಅಪರಾಧ ಕೃತ್ಯ ನಡೆದರೆ ಟಿಂಟೆಡ್ ಗ್ಲಾಸ್ ಹಾಕಿದ ಸಂಸ್ಥೆಯ ಮೇಲೂ ಕೇಸ್

ಮಂಗಳೂರು ಜುಲೈ 10: ಟಿಂಟೆಡ್ ಗ್ಲಾಸ್ ಹಾಕದಂತೆ ಸುಪ್ರೀಂಕೋರ್ಟ್ ನಿರ್ದೇಶನವಿದ್ದರೂ ಮತ್ತೆ ಮತ್ತೆ ಟಿಂಟೆಡ್ ಹಾಕಿ ವಾಹನಗಳು ರೋಡ್ ಗಿಳಿಯುತ್ತಲೇ ಇದೆ. ಪೊಲೀಸ್ ಇಲಾಖೆ ಎಷ್ಟೇ ದಂಡ ಹಾಕಿದರೂ ಮತ್ತೆ ಮತ್ತೆ ಪ್ರಕರಣ ಮರುಕಳಿಸುತ್ತಿದ್ದು. ಇದೀಗ ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಟಿಂಟೆಡ್ ಗ್ಲಾಸ್ ಹಾಕಿದ ವಾಹನದಲ್ಲಿ ಅಪರಾಧ ಕೃತ್ಯ ನಡೆದರೆ ಅದೇ ಪ್ರಕರಣದಲ್ಲಿ ಟಿಂಟೆಡ್ ಗ್ಲಾಸ್ ಹಾಕಿದ ಸಂಸ್ಥೆಯ ಮೇಲೂ ಕೇಸ್ ಹಾಕಲಾಗುವುದು ಎಂದು ಹೇಳಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಡಿಸಿಪಿ ನಗರದಲ್ಲಿ ಟಿಂಟೆಡ್ ಗ್ಲಾಸ್ ಹೊಂದಿರುವ ವಾಹನಗಳ ನಿಯಂತ್ರಿಸಲು ಕಾರ್ಯಾಚರಣೆ ನಡೆಯುತ್ತಿದೆ. ಈ ಬಗ್ಗೆ ಕಾರ್ ಟಿಂಟ್‍ಗಳನ್ನು ತೆಗೆದು ದಂಡ ವಿಧಿಸಲಾಗುತ್ತದೆ. ವಾಹನಗಳಿಗೆ ಟಿಂಟ್ ಹಾಕದಂತೆ ವಾಹನ ಶೋರೂಂಗಳಿಗೆ ಮತ್ತು ವಾಹನ ಅಲಂಕಾರ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಟಿಂಟೆಡ್ ಗ್ಲಾಸ್ ಹೊಂದಿರುವ ಕಾರ್‍ನಲ್ಲಿ ಅಪರಾಧ ನಡೆದರೆ ಟಿಂಟ್ ಹಾಕಿದ ಸಂಸ್ಥೆಯನ್ನು ಕೂಡಾ ಅದೇ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗುವುದು ಎಂದು ಡಿಸಿಪಿ ತಿಳಿಸಿದರು.

ಸಭೆಯಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ , ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ನಾಯ್ಕ, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಉಪ ವಿಭಾಗಾಧಿಕಾರಿ ಹರ್ಷವರ್ಧನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಮಿತಿ ಸದಸ್ಯ ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.