DAKSHINA KANNADA
ಮಂಗಳೂರು ರೈಲ್ವೇ ಪೊಲೀಸ್ ಸಿಬ್ಬಂದಿಯ ಸಕಾಲಿಕ ಸಮಯಪ್ರಜ್ಞೆ,ಉಳಿಯಿತು ಪ್ರಯಾಣಿಕನ ಜೀವ..!

ಮಂಗಳೂರು: ರೈಲ್ವೇ ಪೊಲೀಸ್ ಸಿಬಂದಿಯ ಸಕಾಲಿಕ ಸಮಯ ಪ್ರಜ್ಞೆಯಿಂದ ಪ್ರಯಾಣಿಕನೋರ್ವನ ಜೀವ ಉಳಿದ ಘಟನೆ ಮಂಗಳೂರಿನಲ್ಲಿ ಭಾನುವಾರ ರಾತ್ರಿ ನಡೆದಿದೆ. .
ನಗರದ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಏರಲು ಪ್ರಯತ್ನಿಸಿದ ಪ್ರಯಾಣಿಕನೊಬ್ಬ ಪ್ರಾಣಾಪಾಯಕ್ಕೆ ಸಿಲುಕಿದ್ದ. ಇದನ್ನು ದೂರದಿಂದ ಗಮನಿಸಿದ ರೈಲ್ವೇ ಪೊಲೀಸ್ ವಿಭಾಗದ ಹೆಡ್ ಕಾನ್‌ಸ್ಟೆಬಲ್ ಒಬ್ಬರು ಧಾವಿಸಿ ಬಂದು ಅವರ ಪ್ರಾಣ ರಕ್ಷಿಸಿದ್ದಾರೆ. ರವಿವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ 9.35ರ ವೇಳೆಗೆ ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಚಲಿಸುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಏರಲು ಪ್ರಯಾಣಿಕ ಸಸಂಗ್ ಎಂಬವರು ಪ್ರಯತ್ನಿಸಿದ್ದರು. ಈ ವೇಳೆ ಆಯಾ ತಪ್ಪಿ ಆತ ರೈಲು ಹಳಿ ಮೇಲೆ ಬೀಳುವುದರಲ್ಲಿದ್ದಾಗ ಅಲ್ಲೇ ದೂರದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಎಂ. ರಾಘವನ್ ಧಾವಿಸಿ ಬಂದು ಕೈ ಹಿಡಿದು ಮೇಲಕೆತ್ತಿ ರಕ್ಷಿಸಿ ಪ್ರಾಣ ಉಳಿಸಿದ್ದಾರೆ.
