BANTWAL
ವಿಟ್ಲ ಪೊಲೀಸರಿಂದ ಬಿಗು ವಾಹನ ತಪಾಸಣೆ : ಅನಗತ್ಯವಾಗಿ ಬಂದವರಿಗೆ ಬಿತ್ತು ದಂಡ
ವಿಟ್ಲ, ಮೇ 06: ಕೊರೋನ ಹರಡುವಿಕೆ ಹೆಚ್ಚಾಗಿದ್ದರೂ ಜನ ಇನ್ನೂ ಕ್ಯಾರೇ ಎನ್ನದೆ ಬೇಕಾ ಬಿಟ್ಟಿಯಾಗಿ ಪೇಟೆಗೆ ಬರುತ್ತಿರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ಪೇಟೆಗೆ ಬರುವ ಜನರನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಇಂದು ಮುಂಜಾನೆ ಆರು ಗಂಟೆಯಿಂದ ವಿಟ್ಲದಿಂದ ಪುತ್ತೂರು, ಸಾಲೆತ್ತೂರು, ಕಾಸರಗೋಡು, ಮಂಗಳೂರು ತೆರಳುವ ನಾಲ್ಕು ರಸ್ತೆಯಲ್ಲಿ ವಿಟ್ಲ ಪೊಲೀಸರ ತಂಡ ಬ್ಯಾರಿಕೇಡ್ ಇಟ್ಟು ವಾಹನಗಳಲ್ಲಿ ಪೇಟೆಗೆ ಬರುವವರನ್ನು ವಿಚಾರಣೆ ನಡೆಸಲಾರಭಿಸಿದೆ. ಈ ವೇಳೆ ಅನಗತ್ಯವಾಗಿ ಬಂದಿರುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕೊವಿಡ್ 19 ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಲಾಕ್ ಡೌನ್ ಹೇರುವ ಪ್ರಯತ್ನ ಮಾಡಿದರೂ ಜನರು ಅಗತ್ಯ ವಸ್ತುಗಳ ಹೆಸರಿನಲ್ಲಿ ನಿತ್ಯ ಪೇಟೆಗೆ ಆಗಮಿಸುತ್ತಿದ್ದಾರೆ. ಸಾಕಷ್ಟು ಎಚ್ಚರಿಕೆಗಳನ್ನು ನೀಡಿದರೂ ಜನರು ವಿಟ್ಲ ಪೊಲೀಸರಿಂದ ಬಿಗು ವಾಹನ ತಪಾಸಣೆ : ಅನಗತ್ಯವಾಗಿ ಬಂದವರಿಗೆ ಬಿತ್ತು ದಂಡಯನ್ನು ತೋರುತ್ತಿದ್ದಾರೆ. ಪಟ್ಟಣ ಪಂಚಾಯತ್ ದಂಢ ವಿಧಿಸುವ ಕಾರ್ಯ ಮಾಡಿದರೂ ಜನರು ಕೇರ್ ಮಾಡದ ಕಾರಣದಿಂದ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಕಳೆದ ಕೆಲದಿನಗಳಿಂದ ಪೊಲೀಸರು ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದು, ಅನಗತ್ಯ ಸಂಚರಿಸುವವರಿಗೆ ದಂಡ ವಿಧಿಸಿದ್ದರು ಮಾತ್ರವಲ್ಲದೆ ಕೆಲ ವಾಹನಗಳನ್ನು ಜಪ್ತಿ ಮಾಡಿದ್ದರು. ಆದರೂ ಜನ ಪೇಟೆಗೆ ಬರುವುದನ್ನು ಕಡಿಮೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪುತ್ತೂರು ರಸ್ತೆಯ ಮೇಗಿನ ಪೇಟೆಯಲ್ಲಿ, ಕಾಸರಗೋಡು ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ, ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ, ಸಾಲೆತ್ತೂರು ರಸ್ತೆಯ ನಾಡಕಛೇರಿ ಬಳಿಯಲ್ಲಿ ಚೆಕ್ ಪಾಯಿಂಟ್ ಅನ್ನು ತೆರೆದಿರುವ ವಿಟ್ಲ ಠಾಣಾ ಎಸ್ ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಹೊರ ಭಾಗದಿಂದ ವಿಟ್ಲ ಪ್ರವೇಶಿಸುವ ಪ್ರತಿಯೊಂದೂ ವಾಹನವನ್ನು ತಪಾಸಣೆ ನಡೆಸುತ್ತಿತ್ತು.
ಮನೆ ಸಮೀಪದ ಅಂಗಡಿಯಲ್ಲು ಅಗತ್ಯ ವಸ್ತುಗಳು ಸಿಗದೆ ವಿಟ್ಲಕ್ಕೆ ಬಂದ ಜನರ ಆಧಾರ್ ಕಾರ್ಡ್ ಪರಿಶೀಲನೆ ನಡೆಸಿ ಅವರಿಗೆ ಪೇಟೆಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಸಮೀಪದಲ್ಲಿ ಸಾಮಾಗ್ರಿಗಳು ಇದ್ದೂ ಪೇಟೆಗೆ ಅನಗತ್ಯವಾಗಿ ಆಗಮಿಸಿದ ಜನರ ವಾಹನಗಳನ್ನು ವಶಕ್ಕೆ ಪಡೆಯುವ ಜತೆಗೆ ಕಾನೂನು ಕ್ರಮ ಜರಗಿಸುತ್ತಿರುವುದು ಕಂಡುಬಂತು.