LATEST NEWS
ಪಿಲಿಕುಳ – ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಹುಲಿ ರಾಣಿ
ಮಂಗಳೂರು ಡಿಸೆಂಬರ್ 24: ಪಿಲಿಕುಳ ಉದ್ಯಾನವನದಲ್ಲಿರುವ ಹುಲಿ ರಾಣಿ ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. 14ರ ಹರೆಯದ “ರಾಣಿ’ ಹೆಸರಿನ ಹುಲಿ ಡಿಸೆಂಬರ್ 20ರಂದು ರಾತ್ರಿ ಎರಡು ಮರಿಗಳಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿದೆ.
ಇದರೊಂದಿಗೆ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 4 ಗಂಡು ಹಾಗೂ 4 ಹೆಣ್ಣು ಹುಲಿಗಳಿವೆ. ರಾಣಿ ಹುಲಿ 2016ರಲ್ಲಿ ದಾಖಲೆ ಸಂಖ್ಯೆಯ ಐದು ಆರೋಗ್ಯವಂತ ಮರಿಗಳಿಗೆ ಹಾಗೂ 2021ರಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿತ್ತು. ರಾಣಿಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಮ ಮೂಲಕ ಬನ್ನೇರು ಘಟ್ಟದಿಂದ ತರಲಾಗಿದ್ದು, ಅಲ್ಲಿಗೆ ಇಲ್ಲಿಂದ ಒಂದು ಗಂಡು ಹುಲಿಯನ್ನು ನೀಡಲಾಗಿತ್ತು.