LATEST NEWS
ಮಂಗಳೂರು ರಸ್ತೆಯಲ್ಲಿ ಹುಲಿ ಹೆಲ್ಮೆಟ್ ಕಮಾಲ್
ಮಂಗಳೂರು ರಸ್ತೆಯಲ್ಲಿ ಹುಲಿ ಹೆಲ್ಮೆಟ್ ಕಮಾಲ್
ಮಂಗಳೂರು ಜುಲೈ 2: ಪ್ರತಿಯೊಬ್ಬ ವ್ಯಕ್ತಿಗೂ ಡಿಫರೆಂಟ್ ಡಿಫರೆಂಟ್ ಕ್ರೇಜ್ ಇರೋದು ಸಾಮಾನ್ಯ. ಒಬ್ಬನಿಗೆ ಕಾರುಗಳ ಕ್ರೇಜ್ ಇದ್ದರೆ, ಇನ್ನೊಬ್ಬನಿಗೆ ಬೈಕ್ ಗಳ ಕ್ರೇಜಿ. ಆದರೆ ಇಲ್ಲೊಬ್ಬ ಯುವಕ ತನ್ನ ಡಿಫರೆಂಟ್ ಗೆಟಪ್ ಮೂಲಕ ಎಲ್ಲರ ಮನೆ ಮಾತಾಗಿದ್ದಾನೆ. ಅಂದ ಹಾಗೆ ಯಾರು ಈ ಯುವಕ, ಏನಿವನ ಡಿಫರೆಂಟ್ ಲುಕ್ ಅನ್ನೋದನ್ನು ಹೇಳ್ತೀವಿ ಈ ವರದಿಯಲ್ಲಿ.
ಇದು ದಕ್ಷಿಣಕನ್ನಡ ಜಿಲ್ಲೆಯ ಯುವಕ ಆಕಾಂಕ್ಷ್ ಕುತ್ತಾರ್. ಯಾವ ರೀತಿ ಕೆಲವು ವ್ಯಕ್ತಿಗಳಿಗೆ ಕಾರು, ಬೈಕುಗಳ ಕ್ರೇಜ್ ಇರುತ್ತೋ, ಅದೇ ರೀತಿ ಈ ಯುವಕನಿಗೆ ಡಿಫರೆಂಟ್ ಹೆಲ್ಮೆಟ್ ಧರಿಸಬೇಕೆಂದು ಕ್ರೇಜ್. ವಿದೇಶಗಳಲ್ಲಿ ಹ್ಯಾವೆಂಜರ್ಸ್ ಹೆಲ್ಮಟ್ ಗಳನ್ನು ಧರಿಸಿ ಬೈಕ್ ರೈಡ್ ಮಾಡುವುದನ್ನು ನೋಡಿದ್ದ ಈತನಿಗೂ ವಿಭಿನ್ನ ರೀತಿಯ ಹೆಲ್ಮೆಟ್ ಧರಿಸಬೇಕೆಂಬ ಇಚ್ಛೆಯಾಗಿತ್ತು.
ತುಳುನಾಡಿನ ಜನಪದ ಕುಣಿತವಾದ ಹುಲಿವೇಷದಲ್ಲಿ ಧರಿಸುವ ಹುಲಿಯ ತಲೆಯಂತಹ ಹೆಲ್ಮೆಟ್ ತಯಾರಿಸಿಕೊಡುವಂತೆ ಸ್ನೇಹಿತ ಕಲಾವಿದ ಉಮೇಶ್ ಬೊಳಾರ್ ಅವರಲ್ಲಿ ತಿಳಿಸಿದಾಗ ಉಮೇಶ್ ಬೊಳಾರ್ ಇದಕ್ಕೆ ಒಪ್ಪಿ, ಆಕಾಂಕ್ಷ್ ತಲೆಗೆ ಒಪ್ಪುವಂತಹ ಹೆಲ್ಮೆಟ್ ಸಿದ್ಧಪಡಿಸಿದ್ದಾರೆ. ಸಾಮಾನ್ಯ ಹೆಲ್ಮೆಟ್ ಗೆ ಹುಲಿಯ ತಲೆಯಂತೆ ವಿನ್ಯಾಸ್ ಗೊಳಿಸಿ, ಹುಲಿ ಮುಖದಲ್ಲಿ ಏನಿದೆಯೋ ಅದನ್ನೆಲ್ಲಾ ಹೆಲ್ಮೆಟ್ ನಲ್ಲಿ ಅಳವಡಿಸಿ ಈ ಹೆಲ್ಮೆಟ್ ತಯಾರಿಸಲಾಗಿದೆ.
ಮಂಗಳೂರಿನ ಬ್ಯುಸಿ ಟ್ರಾಫಿಕ್ ನಲ್ಲಿ ಈತ ಬೈಕ್ ನಲ್ಲಿ ಬಂದನೆಂದರೆ ಎಲ್ಲರ ಚಿತ್ತವೂ ಹುಲಿ ತಲೆಯ ಹೆಲ್ಮೆಟ್ ನತ್ತ. ಕೆಲವರು ಈತನನ್ನು ನಿಲ್ಲಿಸಿ ಹೆಲ್ಮೆಟ್ ಪಡೆದು ಅವರ ವಿನ್ಯಾಸವನ್ನು ನೋಡಿ ಖುಷಿಪಟ್ಟರೆ, ಇನ್ನು ಕೆಲವರು ಯಾಕಣ್ಣ ನವರಾತ್ರಿ ಈಗಲೇ ಬಂತೇ ಎಂದು ತಮಾಷೆಯನ್ನೂ ಸಿಡಿಸುತ್ತಾರೆ. ವಿದೇಶಗಳ ಜನ ಎಲ್ಲಾ ವಿಚಾರದಲ್ಲೂ ತಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವಾಗ ತಾನ್ಯಾಕೆ ತುಳುನಾಡಿನ ಜನಪದ ಕುಣಿತವಾದ ಹುಲಿವೇಷವನ್ನು ಹೆಲ್ಮೆಟ್ ಮೂಲಕ ಬಿಂಬಿಸಬಾರದು ಎನ್ನುವುದು ಆಕ್ಷಾಂಕ್ಷ್ ಅಭಿಪ್ರಾಯವೂ ಆಗಿದೆ.