LATEST NEWS
ಇದ್ದಕ್ಕಿದ್ದಂತೆ ಸಾವನಪ್ಪಿದ ಪಿಲಿಕುಳ ನಿಸರ್ಗಧಾಮದ ಹುಲಿ ಓಲಿವರ್…!!

ಮಂಗಳೂರು: ಮುಂಜಾನೆಯವರೆಗೂ ಚುರುಕಾಗಿಯೇ ಇದ್ದ 9 ವರ್ಷ ಪ್ರಾಯದ ಹುಲಿಯೊಂದು ಸಾವನಪ್ಪಿರುವ ಘಟನೆ ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ನಡೆದಿದೆ.
ಓಲಿವರ್ ಎಂಬ ಹೆಸರಿನ ಹುಲಿ ಸಾವನಪ್ಪಿದ್ದು, ಆರೋಗ್ಯವಂತ ಹಾಗೂ ಸದೃಢವಾಗಿದ್ದ ಹುಲಿ ಮುಂಜಾನೆವರೆಗೂ ಚುರುಕಾಗಿಯೇ ಇದ್ದು ಒಮ್ಮಿಂ ದೊಮ್ಮೆಲೇ ಕುಸಿದು ಬಿದ್ದಿದೆ. ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು ಮಾಡಿದ ಪ್ರಯತ್ನ ಫಲಪ್ರದವಾಗಲಿಲ್ಲ.

ಇದು ವಿಕ್ರಂ ಹಾಗೂ ಶಾಂಭವಿ ಹುಲಿ ಜೋಡಿಗೆ ಜನಿಸಿದ್ದ ಎರಡು ಮರಿಗಳಲ್ಲೊಂದು. ಇದರ ಪ್ರಾಯ 9 ವರ್ಷ ಆಗಿತ್ತು. ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ ಹಾಗೂ ಪಶು ಜೈವಿಕ ಶಾಸ್ತ್ರ ಸಂಸ್ಥೆ
ಹಾಗೂ ಉತ್ತರ ಪ್ರದೇಶದ ಭಾರತೀಯ ಪಶು ಸಂಶೋಧನಾ ಸಂಸ್ಥೆಗೆ ಕಳುಹಿಸಿ ಕೊಡಲಾಗಿದೆ.