LATEST NEWS
ಟೆಕ್ ಆಫ್ ಆಗುವಾಗ ಹೊತ್ತಿ ಉರಿದ ಟಿಬೆಟ್ ಏರ್ ಲೈನ್ಸ್ ವಿಮಾನ
ಟಿಬೆಟ್ ಏರ್ ಲೈನ್ಸ್ ಗೆ ಸೇರಿದ ವಿಮಾನವೊಂದು ಟೆಕ್ ಆಫ್ ಸಂದರ್ಭ ಬೆಂಕಿ ತಗುಲಿದ ಘಟನೆ ಚೀನಾದ ಚಾಂಗ್ ಕಿಂಗ್ ನಲ್ಲಿ ನಡೆದಿದೆ. ಚೀನಾಕ್ಕೆ ಸೇರಿದ ಜೋಂಗ್ ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಈ ಅವಘಡ ನಡೆದಿದೆ.
ಏರ್ ಬಸ್ ಎ319 ವಿಮಾನ ಚೋಂಗ್ ಕಿಂಗ್ ನಿಂದ ಟಿಬೆಟ್ ನ ರಾಜಧಾನಿ ಲ್ಹಾಸಾಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಚೀನಾದ ಅಧಿಕೃತ ಪತ್ರಿಕೆ ಪೀಪಲ್ಸ್ ಡೈಲಿ ಪ್ರಕಾರ, ಈ ವಿಮಾನದಲ್ಲಿ 113 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿ ಇದ್ದರು ಎನ್ನಲಾಗಿದ್ದು, 40 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಮಾನ ಬೆಂಕಿಯನ್ನು ಉರಿಯುತ್ತಿರುವುದನ್ನು ಕಾಣಬಹುದು