BANTWAL
ಬಂಟ್ವಾಳದಲ್ಲಿ ಮತ್ತೆ ಗುಡುಗು ಸಿಡಿಲ ಮಳೆಗೆ ಹಲವು ಮನೆಗಳಿಗೆ ಅಪಾರ ಹಾನಿ..!

ಅ.12 ರಂದು ಗುರುವಾರ ಸಂಜೆ ವೇಳೆ ಸುರಿದ ಸಿಡಿಲು ಮಿಂಚು ಸಹಿತ ಬಿರುಗಾಳಿ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎರಡು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
ಬಂಟ್ವಾಳ: ಅ.12 ರಂದು ಗುರುವಾರ ಸಂಜೆ ವೇಳೆ ಸುರಿದ ಸಿಡಿಲು ಮಿಂಚು ಸಹಿತ ಬಿರುಗಾಳಿ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎರಡು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಬಂಟ್ವಾಳ ತಾಲೂಕು ಬಡಗ ಕಜೆಕಾರು ಗ್ರಾಮದ ಕೆಡಿಮೇಲೂ ಮನೆ ನಿವಾಸಿ ನೊಣಯ್ಯ ಎಂಬವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ಉಪಕರಣಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ನಾವೂರು ಗ್ರಾಮದ ಅಂಬೇಡ್ಕರ್ ಕಾಲನಿ ಎಂಬಲ್ಲಿ ಭಾರತಿ ಎಂಬವರ ಮನೆಗೂ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ.
ಸಿಡಿಲು ಸಹಿತ ಭಾರಿ ಮಳೆಗೆ ಅನೇಕ ಕಡೆಗಳಲ್ಲಿ ಹಾನಿಯಾಗಿರುವ ಸಂಭವಿದ್ದು,ಹೆಚ್ಚಿನ ಮಾಹಿತಿ ಕಂದಾಯ ಇಲಾಖೆಯಿಂದ ನಿರೀಕ್ಷಿಸಲಾಗಿದೆ.