Connect with us

    LATEST NEWS

    ಶಂಕಿತ ಕರೋನಾ ಮೂವರು ವಿಧ್ಯಾರ್ಥಿಗಳು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು

    ಶಂಕಿತ ಕರೋನಾ ಮೂವರು ವಿಧ್ಯಾರ್ಥಿಗಳು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು

    ಉಡುಪಿ ಮಾರ್ಚ್ 13: ಶಂಕಿತ ಕರೋನಾ ವೈರಸ್ ನ ಲಕ್ಷಣಗಳು ಕಂಡು ಬಂದ ಹಿನ್ನಲೆ ಮಣಿಪಾಲ ಮಾಹೆಯ ಮೂವರು ವಿಧ್ಯಾರ್ಥಿಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆಸ್ಪತ್ರೆಗೆ ದಾಖಲಾಗಿರುವ ಇಬ್ಬರು ವಿಧ್ಯಾರ್ಥಿಗಳು ಕುವೈತ್ ಹಾಗೂ ಅಮೆರಿಕದಿಂದ ಬಂದವರಾಗಿದ್ದಾರೆ. ಇಂದು ದಾಖಲಾಗಿರುವ ಮತ್ತೋರ್ವ ವಿಧ್ಯಾರ್ಥಿ ಮಲೇಶ್ಯದಿಂದ ಆಗಮಿಸಿದ್ದವನು. ಈ ಮೂವರು ವಿಧ್ಯಾರ್ಥಿಗಳಲ್ಲಿ ಕರೋನಾ ವೈರಸ್ ನ ಲಕ್ಷಣಗಳು ಕಂಡು ಬಂದ ಹಿನ್ನಲೆ ಮೂವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಐಸೋಲೇಟ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೂವರು ವಿಧ್ಯಾರ್ಥಿಗಳ ಗಂಟಲ ದ್ರವ್ಯ ಹಾಗೂ ರಕ್ತವನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಈ ಮೂವರು ವಿಧ್ಯಾರ್ಥಿಗಳ ಪೈಕಿ ಇಬ್ಬರು ವೈದ್ಯಕೀಯ ವಿಧ್ಯಾರ್ಥಿಗಳಾಗಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *