DAKSHINA KANNADA
ಗಾಂಜಾ ಮಾರಾಟಕ್ಕೆ ಯತ್ನ, ಮೂವರು ಆರೋಪಿಗಳ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶ
ಗಾಂಜಾ ಮಾರಾಟಕ್ಕೆ ಯತ್ನ, ಮೂವರು ಆರೋಪಿಗಳ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶ
ಪುತ್ತೂರು, ಅಕ್ಟೋಬರ್ 11: ಸಾರ್ವಜನಿಕರಿಗೆ ಹಾಗೂ ಕಾಲೇಜಿನ ಮಕ್ಕಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಉಪ್ಪಿನಂಗಡಿ ಪೋಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಆಟೋರಿಕ್ಷಾ ಮತ್ತು ಮೋಟಾರು ಸೈಕಲ್ ನಲ್ಲಿ ಮೂವರು ವ್ಯಕ್ತಿಗಳು ಗಾಂಜಾ ತೆಗೆದುಕೊಂಡು ಬರುತ್ತಿದ್ದಾರೆ ಎನ್ನುವ ಮಾಹಿತಿ ಬಂದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್‌ಐ ನಂದಕುಮಾರ್ ಹಾಗೂ ಠಾಣಾ ಸಿಬ್ಬಂಧಿಗಳು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಮೈದಾನದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ಪತ್ತೆ ಹಚ್ಚಿ ಗಾಂಜಾ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮೂವರು ಆರೋಪಿಗಳಿಂದ 4.100 ಕೆ.ಜಿ ತೂಕದ ಗಾಂಜಾವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
1] ಅಬೂಬಕ್ಕರ್ ಸಿದ್ದಿಕ್ ಪ್ರಾಯ 30 ವರ್ಷ ತಂದೆ: ಮಹಮ್ಮದ್ ಎಂ.ಎಸ್, ವಾಸ: ಕಟ್ಟತ್ತಿಲ ಮೆದು ಮನೆ, ಸಾಲೆತ್ತೂರು ಗ್ರಾಮ, ಬಂಟ್ವಾಳ ತಾಲೂಕು
2] ಮಹಮ್ಮದ್ ರಫೀಕ್ ಪ್ರಾಯ: 32 ವರ್ಷ,ತಂದೆ: ದಿ|| ಸುಲೈಮಾನ್, ವಾಸ: ಬೋಳಂತೂರು ಮನೆ, ಬೋಳಂತೂರು ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು
3] ಅಜೀದ್. ಪ್ರಾಯ: 33 ವರ್ಷ ತಂದೆ: ದಿ|| ಆದಂ, ವಾಸ: ಕುಕ್ಕಿನಡ್ಕ ಮನೆ ಉಳಿ ಗ್ರಾಮ. ಬಂಟ್ವಾಳ ತಾಲೂಕು ಎಂಬವರುಗಳನ್ನು ದಸ್ತಗಿರಿ ಮಾಡಲಾಗಿದೆ.
ವಶಪಡಿಸಿಕೊಂಡ 4.100 ಕೆ.ಜಿ ತೂಕ ಗಾಂಜಾ ಹಾಗೂ 01 ಅಟೋ ರಿಕ್ಷಾ ಮತ್ತು 01 ಮೋಟಾರು ಸೈಕಲ್ ನ ಒಟ್ಟು ಮೌಲ್ಯ 2,41,000.00 ರೂ ಆಗಿರುತ್ತದೆ.
ಉಪ್ಪಿನಂಗಡಿ ಠಾಣಾ ಪಿ.ಎಸ್.ಐ ನಂದಕುಮಾರ್ ಹಾಗೂ ಸಿಬ್ಬಂಧಿಗಳಾದ ಎಎಸ್‌ಐ ರುಕ್ಮ ನಾಯ್ಕ್, ಹರೀಶ್ಚಂದ್ರ, ದೇವದಾಸ್, ಇರ್ಷಾದ್ ಪಿ, ಮನೋಹರ ಪಿ.ಸಿ, ವಿನಾಯಕ, ಜಗದೀಶ್, ಹಾಗೂ ಚಾಲಕರಾದ ನಾರಾಯಣ ಗೌಡ ಇವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.